ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರಿಂದ ವಿಚ್ಛೇದನ ಪಡೆದ ಬಳಿಕ ಟೀಮ್ ಇಂಡಿಯಾದ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರನ್ನು ಮದುವೆಯಾಗುತ್ತಾರೆ ಎಂಬ ಊಹಾಪೋಹಾ ಹಬ್ಬಿತ್ತು. ಈ ಬಗ್ಗೆ ಕುದ್ದು ಶಮಿ ಸ್ಪಷ್ಟನೆಯನ್ನು ನೀಡಿದ್ದಾರೆ.
ಯೂಟ್ಯೂಬ್ ಸಂವಾದವೊಂದರಲ್ಲಿ ಮಾತನಾಡಿದ ಶಮಿ, ಸಾನಿಯಾ ಜತೆಗಿನ ಮದುವೆಯ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನನ್ನ ಮತ್ತು ಸಾನಿಯಾ ಮದುವೆಯ ವಿಚಾರವಾಗಿ ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ಇಂತಹ ಗಾಸಿಪ್ ಗಳಿಂದ ಕೆಲವರಿಗೆ ಮನರಂಜನೆ ನೀಡಬಹುದು. ಆದರೆ ಅದರಿಂದ ಉಂಟಾಗುವ ಕೆಟ್ಟ ಪರಿಣಾಮದ ಬಗ್ಗೆ ಗಮನಹರಿಸಬೇಕು ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಗ್ಗೆ ಈ ರೀತಿ ಆಧಾರರಹಿತ ಪೋಸ್ಟ್ ಗಳನ್ನು ಮಾಡದಂತೆ ಶಮಿ ಆಗ್ರಹಿಸಿದ್ದಾರೆ.
ಡೀಪ್‌ಫೇಕ್ ಮೂಲಕ ಶಮಿ ಮತ್ತು ಸಾನಿಯಾ ಮಿರ್ಜಾ ಅವರ ಮುಖವನ್ನು ಈ ಹಿಂದೆ ಸಾನಿಯಾ ಅವರು ಮಲಿಕ್ ಜತೆಗೆ ತೆಗಿಸಿಕೊಂಡಿದ್ದ ಮದುವೆಯ ಫೋಟೊಗೆ ಎಡಿಟ್ ಮಾಡಿ ಶಮಿ ಮತ್ತು ಸಾನಿಯಾ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಲಾಗಿತ್ತು.