Breaking:

ಭಾರೀ ಮಳೆಯ ಮಧ್ಯೆ ಎಲ್ಲಿ ನೋಡಿದ್ರಲ್ಲಿ ಮೊಸಳೆ; ಆತಂಕಿತರಾದ ಜನ

ಗುಜರಾತ್‌ನಾದ್ಯಂತ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಸೃಷ್ಟಿಯಾಗಿದೆ. ಈ ಮಧ್ಯೆ ನದಿಯಲ್ಲಿದ್ದ ಮೊಸಳೆಗಳು ನಗರ ಪ್ರದೇಶಕ್ಕೆ ಬರುತ್ತಿದ್ದು, ಜನರು ಆತಂಕಿತರಾಗಿದ್ದಾರೆ.

ವಡೋದರಾದಲ್ಲಿ ನಗರ ಪ್ರದೇಶದಲ್ಲಿ 15 ಅಡಿಯ ದೈತ್ಯ ಮೊಸಳೆ ಕಂಡು ಬಂದಿದೆ. ರಕ್ಷಣಾ ತಂಡವು ಬೃಹತ್ ಗಾತ್ರದ ಮೊಸಳೆಯನ್ನು ಸೆರೆಹಿಡಿದಿದೆ.

ಅದೇ ರೀತಿ ವಡೋದರಾದ ಫತೇಗುಂಜ್ ಪ್ರದೇಶದ ಕಾಮನಾಥ್ ನಗರದ ನಿವಾಸಿಗಳು ಮೊಸಳೆಯೊಂದು ಪ್ರವಾಹದ ನೀರಿನಲ್ಲಿ ಬಂದು ಕಾಲೋನಿಯ ಮನೆಗೆ ತಲುಪಿದ್ದನ್ನು ನೋಡಿ ಆತಂಕಕ್ಕೀಡಾಗಿದ್ದಾರೆ. ನಂತರ ಮೊಸಳೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ.

ಕಮಲನಾಥ್ ನಗರದ ಮನೆಯೊಂದಕ್ಕೆ ನುಗ್ಗಿದ್ದ ಮೊಸಳೆ ನೀರಿನಲ್ಲಿ ಪತ್ತೆಯಾಗಿದೆ. ಅದೇ ರೀತಿ ಬರೋಡಾದ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದ ಆವರಣದಲ್ಲಿ ಕಾಣಿಸಿಕೊಂಡ ಮೊಸಳೆಯನ್ನು ಅರಣ್ಯ ಇಲಾಖೆ ರಕ್ಷಿಸಿದೆ. ಮನೆಯೊಂದರ ಟೆರೇಸ್ ಮೇಲೆಯೂ ಮೊಸಳೆ ಕಾಣಿಸಿಕೊಂಡಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ.

ನಿನ್ನೆ ಮೊಸಳೆಯೊಂದು ವಡೋದರಲ್ಲಿ ನಗರ ಪ್ರದೇಶಕ್ಕೆ ನಾಯಿಯನ್ನು ಕಚ್ಚಿಕೊಂಡು ಹೋಗಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.



Share this article

ಟಾಪ್ ನ್ಯೂಸ್