Breaking:

ಮೊಸರು ಸೇವನೆಯಿಂದ ಖಿನ್ನತೆ ದೂರ!

ಇತ್ತೀಚಿನ ದಿನಗಳಲ್ಲಿ ಜನರು ಒತ್ತಡದಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಾರೆ. ಖಿನ್ನತೆಗೆ ಹಲವು ಪರಿಹಾರಗಳಿವೆ. ಆದರೆ ಕೇವಲ ಮೊಸರು ತಿನ್ನುವ ಮೂಲಕವೂ ನೀವು ಖಿನ್ನತೆಯಿಂದ ಪಾರಾಗಬಹುದು.

ಸಂಶೋಧನೆಯೊಂದರಲ್ಲಿ ಮೊಸರು ಖಿನ್ನತೆಗೆ ಮದ್ದು ಅನ್ನೋದು ದೃಢಪಟ್ಟಿದೆ. ಮೊಸರಿನಲ್ಲಿರುವ ಪ್ರೋ ಬ್ಯಾಕ್ಟೀರಿಯಾ ಲ್ಯಾಕ್ಟೋಬ್ಯಾಸಿಲ್ಲಸ್, ಖಿನ್ನತೆ ಮತ್ತು ಆತಂಕವನ್ನು ದೂರ ಮಾಡುತ್ತದೆ.

ಮೊಸರು ಸೇವನೆಯಿಂದ ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಖಿನ್ನತೆಗೆ ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಪಡೆಯಬೇಕು. ಇಲ್ಲವಾದಲ್ಲಿ ಬಹಳಷ್ಟು ಸಮಸ್ಯೆಗಳು ಉದ್ಭವಿಸುತ್ತವೆ. ಖಿನ್ನತೆಗೆ ಮೊಸರೇ ಮದ್ದು ಅನ್ನೋದು ಇಲಿಗಳ ಮೇಲೆ ನಡೆಸಿದ ಪ್ರಯೋಗದಿಂದ ದೃಢಪಟ್ಟಿದೆ. ಇಲಿಗಳ ಆಹಾರದಲ್ಲಿ ಲ್ಯಾಕ್ಟೋಬ್ಯಾಸಿಲ್ಲಸ್ ಪ್ರಮಾಣ ಕಡಿಮೆ ಮಾಡಿದಾಗ ಅವು ಖಿನ್ನತೆಗೆ ಒಳಗಾಗಿದ್ದವು. ಆಹಾರದಲ್ಲಿ ಪ್ರೋ ಬ್ಯಾಕ್ಟೀರಿಯಾ ಅಂಶವನ್ನು ಸೇರ್ಪಡೆ ಮಾಡಿದಾಗ ಸಹಜ ಸ್ಥಿತಿಗೆ ಮರಳಿದ್ದವು.

ಹೊಟ್ಟೆಯಲ್ಲಿರುವ ಲ್ಯಾಕ್ಟೋಬ್ಯಾಸಿಲ್ಲಸ್ ಪ್ರಮಾಣ ಮೆಟಾಬೊಲಿಕ್ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಖಿನ್ನತೆ ಆವರಿಸಿಕೊಳ್ಳುತ್ತದೆ ಅಂತಾ ವಿಜ್ಞಾನಿಗಳು ತಿಳಿಸಿದ್ದಾರೆ. ಇನ್ಮೇಲೆ ನಿಮ್ಮ ಡಯಟ್ ನಲ್ಲಿ ಮೊಸರನ್ನೂ ಸೇರಿಸಿ. ಆದ್ರೆ ಮೊಸರನ್ನು ಯಾವ ಪ್ರಮಾಣದಲ್ಲಿ ಸೇವಿಸಿದ್ರೆ ಉತ್ತಮ ಎಂಬ ಬಗ್ಗೆ ವೈದ್ಯರ ಸಲಹೆ ಪಡೆಯಬೇಕಿದೆ.

Share this article

ಟಾಪ್ ನ್ಯೂಸ್