Breaking:

ದರ್ಶನ್ ಪ್ರಕರಣದಲ್ಲಿ ಮುಂದೆ ಬೇರೆಯೇ ಆಗಲಿದೆ! ಅಧಿಕಾರಿಯೋರ್ವರು ಹೇಳುವುದೇನು?

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಈಗಾಗಲೇ ದರ್ಶನ್ ಮತ್ತು ಗ್ಯಾಂಗ್ ಜೈಲಿನಲ್ಲಿದೆ. ದರ್ಶನ್ ಗೆ ಜೈಲಿನಿಂದ ಹೊರತರಲು ಆತನ ಕುಟುಂಬ, ಆಪ್ತ ವಲಯಗಳು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಆದರೆ ಇದೆಲ್ಲವೂ ಅವರು ಅಂದುಕೊಂಡಂತಿಲ್ಲ ಎನ್ನುವುದು ವಾಸ್ತವ.

ಪ್ರಕರಣದಲ್ಲಿ ಕಳೆದ ಒಂದು ತಿಂಗಳಿನಿಂದ ವಿಚಾರಣೆ ನಡಯುತ್ತಿದೆ. ದರ್ಶನ್ ಜೈಲಿನಿಂದ ಹೊರಗಡೆ ಬರುತ್ತಾರೆಯಾ ಅಥವ ಇಲ್ಲವಾ ಎನ್ನುವ ಬಗ್ಗೆ ಯಾರಿಗೂ ಸ್ಪಷ್ಟತೆ ಇಲ್ಲ.

ಈ ಪ್ರಕರಣದಲ್ಲಿ ಸಾಕಷ್ಟು ಮಹತ್ವದ ಸಾಕ್ಷಿಗಳು ಪೊಲೀಸರ ಕೈಸೇರಿವೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಈ ಮೂಲಕ ದರ್ಶನ್‌ ಬಿಡುಗಡೆ ಅಸಾಧ್ಯ ಎನ್ನುವ ಮಾತುಗಳಷ್ಟೇ ಕೇಳಿಬರುತ್ತಿವೆ.

ಈ ಕುರಿತು ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಎಸ್.ಕೆ.ಉಮೇಶ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದು,  ಪೊಲೀಸರು ಈಗಾಗಲೇ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹ ಮಾಡಿದ್ದಾರೆ. ರೇಣುಕಾಸ್ವಾಮಿ ಮೃತದೇಹ ಸಿಕ್ಕಿದಾಗಿನಿಂದಲೂ ಬಲವಾದ ಸಾಕ್ಷಿ ಸಿಕ್ಕಿದೆ ಎನ್ನಲಾಗಿದೆ.

ರೇಣುಕಾಸ್ವಾಮಿಗೆ ಕಿಡ್ನ್ಯಾಪ್‌ ಮಾಡಿರುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಇದಲ್ಲದೆ ಭೀಕರವಾಗಿ ಕೊಲೆ ಮಾಡಿರುವುದು  ದೊಡ್ಡ ಅಪರಾಧವಾಗಿದೆ. ರೌಡಿ ಗ್ಯಾಂಗ್ ಗಳು ಇಂತಹ ಕೃತ್ಯವನ್ನು ಸಾಮಾನ್ಯವಾಗಿ ಮಾಡುತ್ತದೆ. ಆದರೆ ದರ್ಶನ್ ಗ್ಯಾಂಗ್ ಈ ಕೃತ್ಯ ಮಾಡಿ ಇದೀಗ ಕಂಬಿ ಇಂದೆ ಇದೆ.

Share this article

ಟಾಪ್ ನ್ಯೂಸ್