Breaking:

ದರ್ಶನ್ ಗೆ ಕ್ಷಮೆ ನೀಡುತ್ತಾ ರೇಣುಕಾಸ್ವಾಮಿ ಕುಟುಂಬ? ರೇಣುಕಾಸ್ವಾಮಿ ತಂದೆ ಹೇಳಿದ್ದೇನು?

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಜೈಲು ಪಾಲಾಗಿದ್ದು, ಅವರ ವಿರುದ್ಧ ಬಲವಾದ ಸಾಕ್ಷ್ಯಾಗಳು ಪೊಲೀಸರಿಗೆ ಸಿಕ್ಕಿದೆ. ರೇಣುಕಾಸ್ವಾಮಿ ಕುಟುಂಬ ಬಯಸದೆ ದರ್ಶನ್ ರಕ್ಷಣೆ ಸಾಧ್ಯವಿಲ್ಲ ಎನ್ನಲಾಗಿದೆ.

ದರ್ಶನ್ ಕುಟುಂಬ ರೇಣುಕಾಸ್ವಾಮಿ ಕುಟುಂಬದ ಜೊತೆ ಮಾತುಕತೆಗೆ ಪ್ರಯತ್ನಿಸುತ್ತದೆ ಎನ್ನಲಾಗಿತ್ತು. ದರ್ಶನ್ ಜೊತೆ ಕಾಂಪ್ರಮೈಸ್ ಗೆ ತಯಾರಿದ್ದಾರಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ, ಯಾವುದೇ ಕಾರಣಕ್ಕೂ ಕಾಂಪ್ರಮೈಸ್ ಗೆ ನಾವು ಒಪ್ಪಲ್ಲ. ನನ್ನ ಮಗನಿಗೆ ನ್ಯಾಯ ದೊರಕಿಸಿಕೊಡಬೇಕು ಅಷ್ಟೇ ನಮಗಿರುವ ಗುರಿ ಎಂದಿದ್ದಾರೆ.

ದರ್ಶನ್ ಇರಲಿ ಯಾರೇ ಇರಲಿ, ನಮ್ಮ ಮಗ ಕೊನೆಗಳಿಗೆಯಲ್ಲಿ ಏನು ನೋವು ಅನುಭವಿಸಿದ್ದಾನೆ ಎಂದು ನಮಗೆ ಗೊತ್ತು. ಹೀಗಾಗಿ ಅವನ ಸಾವಿಗೆ ನ್ಯಾಯ ಒದಗಿಸಿಕೊಡುವುದೇ ನಮ್ಮ ಮುಂದಿರುವುದು. ಅದು ಬಿಟ್ಟು ಯಾವುದೇ ಕಾಂಪ್ರಮೈಸ್ ಗೆ ನಾವು ಸಿದ್ಧ ಇಲ್ಲ. ಇದುವರೆಗೂ ಸರ್ಕಾರ, ಪೊಲೀಸರು, ಕೋರ್ಟ್ ವಿಚಾರಣೆ ನಮಗೆ ತೃಪ್ತಿ ತಂದಿದೆ. ಕಾನೂನು ಪ್ರಕಾರ ಏನು ನಡೆಯಬೇಕೋ ಅದು ನಡೆಯಲಿ ಎಂದು ಹೇಳಿದ್ದಾರೆ.

Share this article

ಟಾಪ್ ನ್ಯೂಸ್