Breaking:

ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿಯ ಗುದನಾಳದಿಂದ 16 ಇಂಚಿನ ಸೋರೆಕಾಯಿ ತೆಗೆದ ವೈದ್ಯರು!

ಹೊಟ್ಟೆನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೋರ್ವನ ಗುದನಾಳದಿಂದ ಶಸ್ತ್ರಚಿಕಿತ್ಸೆ ನಡೆಸಿ 16 ಇಂಚಿನ ಸೋರೆಕಾಯಿ ವೈದ್ಯರು ಹೊರತೆಗೆದ ವಿಚಿತ್ರ ಘಟನೆ ಮಧ್ಯಪ್ರದೇಶದ ಛತ್ತರ್ ಪುರದಲ್ಲಿ ನಡೆದಿದೆ.

 60 ವರ್ಷದ ವ್ಯಕ್ತಿಯೊಬ್ಬರು ಹೊಟ್ಟೆ ನೋವು ಮತ್ತು ಖಾಸಗಿ ಅಂಗಗಳಲ್ಲಿ ನೋವಿನಿಂದ ಆಸ್ಪತ್ರೆಗೆ ಸೇರಿಸಿದ್ದಾರೆ. ವೈದ್ಯರು ಎಕ್ಸರೇ ತೆಗೆದು ನೋಡಿದಾಗ ವ್ಯಕ್ತಿಯ ಗುದದ್ವಾರದಲ್ಲಿ 16 ಇಂಚಿನ ಸೋರೆಕಾಯಿ ಇರುವುದು ಕಂಡುಬಂದಿದೆ. ಇದನ್ನು ನೋಡಿದ ವೈದ್ಯರು ಬೆಚ್ಚಿಬಿದ್ದು, ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ (TOI) ಪ್ರಕಾರ, 60 ವರ್ಷದ ರೈತ ತೀವ್ರ ಹೊಟ್ಟೆ ನೋವಿನ ಬಗ್ಗೆ ವೈದ್ಯರ ಬಳಿಗೆ ಬಂದರು. ವೈದ್ಯಕೀಯ ತಜ್ಞರು ಎಕ್ಸ್-ರೇ ಮಾಡಿಸಿದ್ದು, ಅವರ ಗುದನಾಳದಲ್ಲಿ ಸೋರೆಕಾಯಿ ಇರುವುದು ಪತ್ತೆಯಾಗಿದೆ. ಆದರೆ, ತರಕಾರಿ ಅವನ ಗುದನಾಳದಲ್ಲಿ ಹೇಗೆ ಹೋಗಿದೆ ಎಂಬುದು ಸ್ಪಷ್ಟವಾಗಿಲ್ಲ. ಅಲ್ಲದೆ ಈ ಬಗ್ಗೆ ವ್ಯಕ್ತಿ ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ.

ಗುದದ್ವಾರದ ಮೂಲಕ ಸೋರೆಕಾಯಿ ಹೇಗೆ ಹಾದುಹೋಗಿದೆ ಎಂಬ ಬಗ್ಗೆ ವೈದ್ಯರು ಅವಲೋಕನ ಮಾಡುತ್ತಿದ್ದಾರೆ. ಸಂತ್ರಸ್ತರ ಆರೋಗ್ಯ ಸ್ಥಿತಿ ಸುಧಾರಿಸಿದೆ ಎನ್ನಲಾಗಿದೆ.

Share this article

ಟಾಪ್ ನ್ಯೂಸ್