Breaking:

ದುಬೈನಲ್ಲಿ 16 ಕೋಟಿ ಲಾಟರಿ ಗೆದ್ದ ಇಬ್ಬರು ಮಲಯಾಳಿಗಳು

ಮಿಲೇನಿಯಂ ಮಿಲಿಯನೇರ್ ಡ್ರಾದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿರುವ ಕೇರಳ ಮೂಲದ ಇಬ್ಬರಿಗೆ ಬುಧವಾರದಂದು 16 ಕೋಟಿ ರೂ ಬಹುಮಾನ ಬಂದಿದೆ.

ಬಹುಮಾನ ಗೆದ್ದ ಮೊದಲ ಗುಂಪಿನಲ್ಲಿ ಮಲಯಾಳಿ ಅಬ್ದುಲ್ ಅಜೀಜ್ ಹೆಸರಿನಲ್ಲಿ ಖರೀದಿಸಿದ ಚೀಟಿಗೆ ಬಹುಮಾನ ಲಭಿಸಿದೆ. 38 ವರ್ಷದ ಅಬ್ದುಲ್ ಅಜೀಜ್ ಅವರು ಆಗಸ್ಟ್ 31 ರಂದು ಖರೀದಿಸಿದ ಟಿಕೆಟ್ ಸಂಖ್ಯೆ 3361 ನೊಂದಿಗೆ ಮಿಲೇನಿಯಂ ಮಿಲಿಯನೇರ್ ಸರಣಿ 472 ರಲ್ಲಿ ವಿಜೇತರಾದರು. ತನ್ನ ಸಹೋದರ ಮತ್ತು ಸ್ನೇಹಿತರೊಂದಿಗೆ ಅಜೀಜ್ ಬಹುಮಾನ ವಿಜೇತ ಟಿಕೆಟ್ ಖರೀದಿಸಿದ್ದರು. ಅವರು ಮೂರನೇ ಬಾರಿಗೆ ಈ ಟಿಕೆಟ್ ಖರೀದಿಸುತ್ತಿದ್ದಾರೆ. ಈ ಹಿಂದೆ ಎರಡು ಬಾರಿ ಖರೀದಿಸಿದ್ದರು ಆದರೆ ಅದೃಷ್ಟ ಒಲಿದು ಬಂದಿರಲಿಲ್ಲ.

ಅಬ್ದುಲ್ ಅಜೀಜ್ 12 ವರ್ಷಗಳಿಂದ ದುಬೈನಲ್ಲಿ ನೆಲೆಸಿದ್ದು, ಕಂಪನಿಯೊಂದರಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.

ಇನ್ನೊಂದು ಮಲಯಾಳಿ ಗುಂಪು ಕೂಡ 8 ಕೋಟಿ ರೂಪಾಯಿ ಬಹುಮಾನ ಪಡೆದಿದೆ. ಮಲಯಾಳಿ ನಾಸೀರ್ ಅರಿಕೋತ್ ಹೆಸರಿನಲ್ಲಿ ಟಿಕೆಟ್ ಖರೀದಿಸಲಾಗಿದೆ. 48 ವರ್ಷದ ನಾಸೀರ್ ಶಾರ್ಜಾದಲ್ಲಿ 13 ವರ್ಷದಿಂದ ವಾಸಿಸುತ್ತಿದ್ದಾರೆ. ಅವರು ಶಾರ್ಜಾದ ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿದ್ದರು.

Share this article

ಟಾಪ್ ನ್ಯೂಸ್