ಅಪ್ರಾಪ್ತ ಬಾಲಕಿಯೋರ್ವಳು ಮೃತ ತಾಯಿಯ ಅಂತ್ಯ ಸಂಸ್ಕಾರಕ್ಕೆ ಹಣವಿಲ್ಲದೆ ತಾಯಿಯ ಮೃತ ದೇಹ ಮುಂದಿಟ್ಟು ಕುಳಿತು ಭಿಕ್ಷೆ ಬೇಡಿದ ಹೃದಯವಿದ್ರಾಹಕ ಘಟನೆ ತೆಲಂಗಾಣದ ನಿರ್ಮಲ್ ಜಿಲ್ಲೆಯ ತನೂರ್ ಮಂಡಲದಲ್ಲಿರುವ ಭೇಲ್ ತರೋಡಾ ಗ್ರಾಮದಲ್ಲಿ ನಡೆದಿದೆ.
ಅಪ್ರಾಪ್ತ ಬಾಲಕಿ ಭಿಕ್ಷೆ ಬೇಡುತ್ತಿರುವ ಮತ್ತು ತನ್ನ ತಾಯಿಯ ಅಂತ್ಯಕ್ರಿಯೆಗೆ ಹಣವನ್ನು ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಕೆಲವು ತಿಂಗಳ ಹಿಂದೆ ದುರ್ಗಾ ಅವರ ತಂದೆ ಅನಾರೋಗ್ಯದಿಂದ ನಿಧನರಾಗಿದ್ದರು, ಬಳಿಕ ತಾಯಿ ಗಂಗಾಮಣಿ ತನ್ನ ಚಿಕ್ಕ ಮಗಳನ್ನು ಬಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ತನ್ನ ತಾಯಿಯ ಆತ್ಮಹತ್ಯೆಯ ನಂತರ, ದುರ್ಗಾ ಸಂಪೂರ್ಣವಾಗಿ ಏಕಾಂಗಿಯಾಗಿದ್ದಾಳೆ. ಯಾವುದೇ ಸಂಬಂಧಿಕರು ಅವಳಿಗೆ ಸಹಾಯ ಮಾಡಲು ಮುಂದೆ ಬರದ ಕಾರಣ, ಅವಳು ತನ್ನ ತಾಯಿಯ ಮೃತದೇಹದ ಬಳಿ ಕುಳಿತು ಅಳುತ್ತಿದ್ದಳು. ಈ ಹೃದಯ ವಿದ್ರಾವಹಕ ಘಟನೆಯ ವಿಡಿಯೋ ವೈರಲ್ ಆಗಿದೆ.