Breaking:

ಮಾಜಿ ಕಾರ್ಪೊರೇಟರ್ ಮೇಲೆ‌ ತಂಡದಿಂದ ಹಲ್ಲೆ

ಮಾಜಿ ಕಾರ್ಪೊರೇಟರ್ ಓರ್ವರ ಮೇಲೆ ಗುರುವಾರ ರಾತ್ರಿ ಹಲ್ಲೆ ನಡೆದಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ಮಾಜಿ ಕಾರ್ಪೊರೇಟರ್ ಸತ್ಯನಾರಾಯಣ ರಾಜು ಎಂಬವರ ಮೇಲೆ ಕುಸ್ಕೂರು ಬಳಿ ಜಮೀನು ವಿಚಾರವಾಗಿ ಈ ಹಲ್ಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಮೀನು ಖರೀದಿ ವಿಚಾರಕ್ಕೆ ಸತೀಶ್ ವ್ಯಾಜ್ಯ ಹೊಂದಿದ್ದರೆನ್ನಲಾಗಿದೆ. ಸತೀಶ್ ಗುರುವಾರ ದಿನ ರಾತ್ರಿ ತಮ್ಮ ಜಮೀನಿನ ಬಳಿ ತೆರಳಿದ್ದಾಗ, ಅವರ ಕಾರಿನ ಮೇಲೆ ದೊಣ್ಣೆಗಳಿಂದ ತಂಡವೊಂದು ದಾಳಿ ನಡೆಸಿದೆ. ಈ ವೇಳೆ ಸತೀಶ್ ಅಲ್ಲಿಂದ ತಪ್ಪಿಸಿಕೊಂಡು ತೆರಳಿದ್ದಾರೆ.

ಘಟನೆ ಬಗ್ಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಎಸ್ಪಿ ಮಿಥುನ್ ಕುಮಾರ್ ಜಿ.ಕೆ. ಸತೀಶ್ ಮೇಲೆ ಜಮೀನು ವ್ಯಾಜ್ಯದ ಹಿನ್ನೆಲೆ ಹಲ್ಲೆ ನಡೆದಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸುವುದಾಗಿ ಹೇಳಿದ್ದಾರೆ.

Share this article

ಟಾಪ್ ನ್ಯೂಸ್