Breaking:

ನನ್ನ ತಂದೆಯನ್ನು ಜೈಲಿಗೆ ಕಳಿಸಿ ಎಂದು ಪೊಲೀಸ್ ಠಾಣೆಗೆ ತೆರಳಿ ದೂರು ಕೊಟ್ಟ 5 ವರ್ಷದ ಬಾಲಕ!

5 ವರ್ಷದ ಬಾಲಕನೊಬ್ಬ ತನ್ನ ತಂದೆಯ ವಿರುದ್ಧ ಎಫ್‌ಐಆರ್ ದಾಖಲಿಸಲು ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ.

ತಂದೆ ನದಿಗೆ ಹೋಗದಂತೆ ಮತ್ತು ರಸ್ತೆಯಲ್ಲಿ ಆಟವಾಡದಂತೆ ತಡೆಯುತ್ತಾರೆಂದು ಮುಗ್ಧ ಬಾಲಕ ಪೊಲೀಸ್ ಠಾಣೆಗೆ ತೆರಳಿ ಎಫ್‌ಐಆರ್ ದಾಖಲಿಸುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

 

 

<script async src=”https://pagead2.googlesyndication.com/pagead/js/adsbygoogle.js?client=ca-pub-4685621585864602″
crossorigin=”anonymous”></script>
<!– Ads 1 –>
<ins class=”adsbygoogle”
style=”display:block”
data-ad-client=”ca-pub-4685621585864602″
data-ad-slot=”6927469720″
data-ad-format=”auto”
data-full-width-responsive=”true”></ins>
<script>
(adsbygoogle = window.adsbygoogle || []).push({});
</script>

 

 

ವಿಡಿಯೊದಲ್ಲಿ ಮಗು ದೂರು ನೀಡಲು ಪೊಲೀಸ್ ಠಾಣೆಯಲ್ಲಿ ಕುರ್ಚಿಯ ಮೇಲೆ ಕುಳಿತಿದೆ. ಒಬ್ಬ ಪೊಲೀಸ್ ಅಧಿಕಾರಿ ಅವನ ಮುಂದೆ ಕುಳಿತು ಅವನ ಹೆಸರು, ಯಾರ ವಿರುದ್ಧ ದೂರು ನೀಡಲು ಬಯಸುತ್ತಾರೆ ಮತ್ತು ಅಪರಾಧದ ಬಗ್ಗೆ ಕೇಳುತ್ತಾರೆ. ಅಧಿಕಾರಿಗೆ ಉತ್ತರಿಸಿದ ಮಗು ನನ್ನ ಹೆಸರು ಹಸನೈನ್, ತಂದೆ ಇಕ್ಬಾಲ್. ಅವರು ನದಿಗೆ ಹೋಗದಂತೆ ಮತ್ತು ಬೀದಿಯಲ್ಲಿ ಆಡದಂತೆ ತಡೆಯುತ್ತಾರೆ ಎಂದು ದೂರು ನೀಡಿದ್ದಾನೆ.

ತಂದೆ ವಿರುದ್ಧ ತನಿಖೆ ನಡೆಸಿ ಅವರನ್ನು ಜೈಲಿನೊಳಗೆ ಹಾಕಬೇಕು ಎಂದು ಹೇಳಿದ್ದಾನೆ. ಬಾಲಕನ ಮಾತು ಕೇಳುತ್ತಿದ್ದಂತೆ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ನಕ್ಕಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

 

Share this article

ಟಾಪ್ ನ್ಯೂಸ್