ಕೊಳವೊಂದರಲ್ಲಿ ಸ್ನಾನ ಮಾಡಿದ್ದ ಯುವಕನೊಬ್ಬ ಮೆದುಳು ಜ್ವರದಿಂದ ಮೃತಪಟ್ಟಿದ್ದು, ಇನ್ನೂ 4 ಮಂದಿಯಲ್ಲಿ ತೀವ್ರ ಜ್ವರ ಕಾಣಿಸಿಕೊಂಡಿರುವ ಘಟನೆ ಕೇರಳದ ನೆಯ್ಯಾಟಿಂಕರ ಪ್ರದೇಶದಲ್ಲಿ ನಡೆದಿದೆ.
ಪ್ಲಾವರತಾಳದ ಅನೀಶ್ (26), ಪುತಮಕೋಟ್‌ನ ಅಚ್ಚು (25), ಹರೀಶ್ (27) ಮತ್ತು ಪುತ್ತಮಕೋಟ್ ಬಳಿಯ ಧನುಷ್ (26) ಬೋಧಿನಗರದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ನಾಲ್ವರ ಪೈಕಿ ಒಬ್ಬರಿಗೆ ಮೆದುಳು ಜ್ವರ ಇರುವುದು ಪತ್ತೆಯಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಇದರಿಂದ ಇಲಾಖೆ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದೆ.
ಆಸ್ಪತ್ರೆಗೆ ದಾಖಲಾದವರ ಪೈಕಿ ಅನೀಶ್‌ಗೆ ಮೆದುಳು ಜ್ವರ ಕಾಣಿಸಿಕೊಂಡಿತ್ತು. ಇತರರಿಗೂ ಇದೇ ರೋಗಲಕ್ಷಣಗಳು ಇರುವುದಾಗಿ ವರದಿಯಲ್ಲಿ ತಿಳಿದು ಬಂದಿದೆ.
ಇವರ ಜೊತೆಗಿದ್ದ ಅಖಿಲ್ (27) ಕಳೆದ 23 ರಂದು ಕನ್ನರವಿಲ ಪುತಮಕೋಟ್ ಅನುಲಾಲ್ ಭವನದಲ್ಲಿ ನಿಧನರಾಗಿದ್ದಾರೆ. ಸಾಯುವ 10 ದಿನಗಳ ಮೊದಲು ಅಖಿಲ್‌ಗೆ ಜ್ವರ ಬಂದಿತ್ತು. ಆರಂಭದಲ್ಲಿ ಮನೆ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ತೀವ್ರ ತಲೆನೋವು ಕೂಡ ಇತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ.