Breaking:

ಮೆಗ್ಗಾರ್ ಯಂತ್ರದಿಂದ ಶಾಕ್ ಕೊಟ್ಟು ರೇಣುಕಾಸ್ವಾಮಿ ಕೊಲೆ; FSL ವರದಿಯಲ್ಲಿ ಸ್ಪೋಟಕ ಮಾಹಿತಿ ಬಯಲು

ಬೆಂಗಳೂರು:ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ
ನಟ ದರ್ಶನ್ & ಗ್ಯಾಂಗ್ ಈಗಾಗಲೇ ಜೈಲಿನಲ್ಲಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸ್ಪೋಟಕ‌ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದ್ದು, ಮೆಗ್ಗಾರ್ ಯಂತ್ರದಿಂದ ಶಾಕ್ ಕೊಟ್ಟು ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದೆ ಎಂದು ತಿಳಿದು‌ ಬಂದಿದೆ.

ಈ ಕುರಿತು FSL ರಿಪೋರ್ಟ್ ಪೊಲೀಸರ ಕೈ ಸೇರಿದ್ದು, ವರದಿಯಲ್ಲಿ ರೇಣುಕಾಸ್ವಾಮಿಗೆ ಮೆಗ್ಗಾರ್ ಯಂತ್ರದ ಶಾಕ್ ಕೊಟ್ಟು ಕೊಲೆ ಮಾಡಲಾಗಿದೆ ಎಂಬ ಸ್ಪೋಟಕ ಮಾಹಿತಿ ಲಭ್ಯವಾಗಿದೆ.

ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿ ನಂತರ ಮೆಗ್ಗಾರ್ ಯಂತ್ರದ ಶಾಕ್ ಕೊಟ್ಟು ಕೊಲೆ ಮಾಡಲಾಗಿದೆ. ಈ ಶಾಕ್ ನಿಂದ ಆತ ಮೃತಪಟ್ಟಿದ್ದಾನೆ ಎಂಬುದು ಧೃಡವಾಗಿದೆ ಎಂದು ವರದಿಯಾಗಿದೆ.

ಇನ್ನೊಂದು ವಾರದಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಎಫ್ ಎಸ್ ಎಲ್ ವರದಿಗಳು ಪೊಲೀಸರ ಕೈ ಸೇರಲಿದ್ದು, ಡಿ ಗ್ಯಾಂಗ್ ಗೆ ಮತ್ತಷ್ಟು ಉರುಳಾಗುವ ಸಾಧ್ಯತೆಯಿದೆ.



Share this article

ಟಾಪ್ ನ್ಯೂಸ್