Breaking:

ಸರಕಾರಿ ಬಸ್ ಹರಿದು ಬಾಲಕ ಮೃತ್ಯು

ಸರ್ಕಾರಿ ಬಸ್ ಹರಿದು ಬಾಲಕ ಮೃತಪಟ್ಟಿರುವ ದಾರುಣ ಘಟನೆ ಬೀದರ್‌ ಜಿಲ್ಲೆಯ ಹುಲಸೂರು ತಾಲೂಕಿನ ಮಿರಖಲ್ ಗ್ರಾಮದಲ್ಲಿ ನಡೆದಿದೆ.

ಮಹಾರಾಷ್ಟ್ರದ ನಿಲಂಗಾ ಗ್ರಾಮದ ನಿವಾಸಿ ಗಣೇಶ್ ಪೇಟಕಾರ್ (6) ಸಾವನಪ್ಪಿದ ದುರ್ದೈವಿ

ಅಜ್ಜಿಯ ಮನೆಗೆಂದು ಮಿರಖಲ್ ಗ್ರಾಮಕ್ಕೆ ಬಂದಿದ್ದ ಬಾಲಕ ಬಸವಕಲ್ಯಾಣದಿಂದ ಮಿರಖಲ್ ಮಾರ್ಗವಾಗಿ ನಿಲಂಗಾಕ್ಕೆ ತೆರಳುವಾಗ ಸಾರಿಗೆ ಬಸ್ ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಬಾಲಕ ಮೃತಪಟ್ಟಿದ್ದಾನೆ.

ಬಾಲಕನನ್ನು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ರವಾನಿಸುವ ವೇಳೆ ಬಾಲಕ ಸಾವನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ಹುಲಸೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share this article

ಟಾಪ್ ನ್ಯೂಸ್