ಗಂಗಾವತಿ ನಗರದಲ್ಲಿ ವಿದ್ಯುತ್ ಮೇಲಿರುವ ಧಾರ್ಮಿಕ ಚಿಹ್ನೆ ಅಳವಡಿಕೆ ವಿಷಯ ವಿವಾದಕ್ಕೆ ತಿರುಗಿದೆ.
ಈ ಬಗ್ಗೆ ಎಸ್ಡಿಪಿಐ ದೂರು ಆಧರಿಸಿ ತೆರವಿಗೆ ಸೂಚಿಸಿದ್ದ ತಾಲೂಕು ಆಡಳಿತ, ಸದ್ಯ ತೆರವು ಮಾಡದಂತೆ ಸೂಚಿಸಿದೆ ಎಂದು ವರದಿಯಾಗಿದೆ.
ಗಂಗಾವತಿ ನಗರದ ಇಂದಿರಾಗಾಂಧಿ ವೃತ್ತದಿಂದ ಮಹಾರಾಣ ಪ್ರತಾಪ ಸಿಂಗ್ ವೃತ್ತವರೆಗೆ ನಗರಸಭೆ ವಿದ್ಯುತ್ ದೀಪ ಕಂಬ ಅಳವಡಿಸಿದೆ.ಕಂಬದ ಮೇಲೆ ಹಿಂದು ಧಾರ್ಮಿಕ ಚಿಹ್ನೆಗಳಾದ ಗಧೆ, ಬಿಲ್ಲು, ಬಾಣ ಹಾಗೂ ವೆಂಕಟೇಶ್ವರ ಸ್ವಾಮಿ ಚಿಹ್ನೆಗಳನ್ನು ಹಾಕಲಾಗಿದೆ. ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿ ಚಿಹ್ನೆ ಅಳವಡಿಸಿದ್ದು ಇತರರ ಧಾರ್ಮಿಕ ಭಾವನೆಗೆ ಧಕ್ಕೆ ಆಗುತ್ತದೆಂದು ಎಸ್ಡಿಪಿಐ ಖಂಡಿಸಿದೆ. ಕೂಡಲೇ ಕಂಬ ತೆರವು ಮಾಡುವಂತೆ ಆಗ್ರಹಿಸಿದೆ.
ಇದಕ್ಕೆ ಹಿಂದುಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಮನವಿ ಆಧರಿಸಿ ಡಿಸಿ ಮೌಖಿಕ ಆದೇಶದ ಮೇರೆಗೆ ಕಂಬ ತೆರವು ಮಾಡುವಂತೆ ಗಂಗಾವತಿ ತಹಸೀಲ್ದಾರ್ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಜತೆಗೆ ಕಾಮಗಾರಿ ನಿರ್ವಹಿಸಿದ ಕೆಆರ್‌ಐಡಿಎಲ್ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ.
ಅಲ್ಲದೆ ತಮ್ಮ ಆದೇಶ ವಾಪಸ್ ಪಡೆವ ಮೂಲಕ ಮತ್ತೆ ಗೊಂದಲಕಾರಿ ನಡೆ ಅನುಸರಿಸಿದ್ದು ಮತ್ತೊಂದು ವಿವಾದವನ್ನು ತಾಲೂಕಾಡಳಿತವೇ ಹುಟ್ಟುಹಾಕಿದೆ.