Breaking:

ಗಂಗಾವತಿಯಲ್ಲಿ ಭಯಾನಕ ಘಟನೆ: ರೈಲ್ವೇ ಹಳಿಯಲ್ಲಿ ಮಲಗಿದ್ದ ಯುವಕರ ಮೇಲೆ ರೈಲು ಹರಿದು ಮೂವರು ಮೃತ್ಯು

ಗಂಗಾವತಿ: ಮದ್ಯ ಸೇವನೆ ಮಾಡಿ ರೆಲ್ವೆ ಟ್ರ್ಯಾಕ್ ಮೇಲೆ ಮಲಗಿದ್ದ ಮೂವರು ಯುವಕರ ಮೇಲೆ ರೈಲು ಹರಿದ ದುರಂತ ಘಟನೆ ನಡೆದಿದ್ದು, ಘಟನೆಯಿಂದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನಗರದ ಕಿಲ್ಲಾ ಏರಿಯಾದ ಮೌನೇಶ ಶ್ರೀನಿವಾಸ ಬೈಲ್ ಪತ್ತಾರ (23), ಅಣ್ಣೂರು ಗೌರಮ್ಮ ಕ್ಯಾಂಪಿನ ಸುನಿಲ್ ತಿಮ್ಮಣ್ಣ (23) ಹಾಗೂ ಹಿರೇಜಂತಕಲ್​​ನ ವೆಂಕಟ ಭೀಮರಾಯ (20) ಮೃತ ಯುವಕರು.

ಔತಣಕೂಟದ ಬಳಿಕ ತಮಾಷೆಗೆಂದು ಹಳಿ ಮೇಲೆ ಮಲಗಿದ್ದಾಗ ರೈಲು ಹರಿದು ಮೂವರು ಯುವಕರು ಮೃತಪಟ್ಟಿದ್ದಾರೆ.

ರೈಲ್ವೆ ಹಳಿಯ ಪಕ್ಕದಲ್ಲಿ ಯುವಕರು ಔತಣಕೂಟ ಮಾಡಿದ್ದಾರೆ. ಬಳಿಕ ತಮಾಷೆಗೆಂದು ಹಳಿಯ ಮೇಲೆಯೇ ಮಲಗಿದ್ದಾರೆ. ಈ ಸಂದರ್ಭದಲ್ಲಿ ಗಂಗಾವತಿ ಮಾರ್ಗವಾಗಿ ಹೊರಟಿದ್ದ ಹುಬ್ಬಳ್ಳಿ-ಸಿಂಧನೂರು ಪ್ಯಾಸೆಂಜರ್ ರೈಲು ಬಂದಿದ್ದು, ಯುವಕರು ಸಾವನ್ನಪ್ಪಿದ್ದಾರೆ.

ಗದಗ ವಿಭಾಗದ ರೈಲ್ವೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅವಘಡಕ್ಕೆ ಮೃತದೇಹಗಳು ಹಳಿಯ ಮೇಲೆಯೇ ಚೆಲ್ಲಾಪಿಲ್ಲಿಯಾಗಿ ಮಲಗಿದೆ. ಈ ಬಗ್ಗೆ ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article

ಟಾಪ್ ನ್ಯೂಸ್