Breaking:

ಗ್ರಾಹಕರೇ ಎಚ್ಚರ! ಮಾರುಕಟ್ಟೆಗೆ ಬಂದಿದೆ ಸಿಮೆಂಟ್ ಬೆಳ್ಳುಳ್ಳಿ! ಏನಿದು ಪ್ರಕರಣ?

ನಕಲಿ ಬೆಳ್ಳುಳ್ಳಿ ಮಾರಾಟ ಮಾಡುವ ಪ್ರಕರಣ ಮಹಾರಾಷ್ಟ್ರದ ಅಕೋಲಾದಲ್ಲಿ ಬೆಳಕಿಗೆ ಬಂದಿದೆ.

ಅಕೋಲಾದಲ್ಲಿ ಬೆಳ್ಳುಳ್ಳಿಯ ಬದಲು ವ್ಯಾಪಾರಿಯೊಬ್ಬರು ಸಿಮೆಂಟ್ ಬೆಳ್ಳುಳ್ಳಿ ಮಾರಾಟ ಮಾಡಿರುವ ಆರೋಪ ಕೇಳಿ ಬಂದಿದೆ. ಸದ್ಯ ಈ ಸುದ್ದಿ ವೈರಲ್​ ಆಗುತ್ತಿದ್ದು, ನಾಗರೀಕರು ಮಾರಾಟಗಾರರ ವಿರುದ್ಧ ಧ್ವನಿ ಎತ್ತಿದ್ದಾರೆ. ಅದೇ ರೀತಿ ಜನರಿಗೂ ಈ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ಇನ್ನು ಸಿಮೆಂಟ್​ ಬೆಳ್ಳುಳ್ಳಿಯನ್ನು ಬೇರ್ಪಡಿಸಲು ಪ್ರಯತ್ನಿಸಿದಾಗ ನಕಲಿ ಎಂದು ಬಯಲಾಗಿದೆ. ಚಾಕುವಿನಿಂದ ಕತ್ತರಿಸಿದಾಗ ಅದು ಸಿಮೆಂಟ್​ನಿಂದ ಮಾಡಿದ ಬೆಳ್ಳುಳ್ಳಿ ಎಂದು ಬೆಳಕಿಗೆ ಬಂದಿದೆ.

ಅಕೋಲಾದಲ್ಲಿ ಬೆಳ್ಳುಳ್ಳಿ ನಕಲಿ ಮಾರಾಟಗಾರರು ಜನರನ್ನು ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಅಕೋಲಾ ನಗರದ ಹೆಚ್ಚಿನ ಭಾಗಗಳಲ್ಲಿ, ಈ ವ್ಯಾಪಾರಿಗಳು ಪ್ರತಿದಿನ ತರಕಾರಿಗಳನ್ನು ಮಾರಾಟ ಮಾಡಲು ಬರುತ್ತಾರೆ, ಅವರಲ್ಲಿ ಕೆಲವರು ನಕಲಿ ಬೆಳ್ಳುಳ್ಳಿಯನ್ನು ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.

 

Share this article

ಟಾಪ್ ನ್ಯೂಸ್