ಇಬ್ಬರು ಉಪನ್ಯಾಸಕರ ನಡುವೆ ಜಗಳವಾಗಿ ಹೊಡೆದಾಡಿಕೊಂಡಿರುವ ಘಟನೆ ಕೋಲಾರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಕೋಲಾರ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ, ಹಾಲಿ ರಾಜ್ಯಶಾಸ್ತ್ರ ಉಪನ್ಯಾಸಕ ನಾಗಾನಂದ ಕೆಂಪರಾಜು ಮತ್ತು ಕನ್ನಡ ಉನ್ಯಾಸಕ ಜೆ.ಜಿ ನಾಗರಾಜ್ ನಡುವೆ ಜಗಳ ನಡೆದಿದೆ.
ಗಲಾಟೆಯಲ್ಲಿ ನಾಗರಾಜ್ ಅವರ ಕಪಾಳಕ್ಕೆ ಹೊಡೆದು ಹಲ್ಲೆ ಮಾಡಿಲಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸ್ನೇಹಿತರಾಗಿದ್ದ ನಾಗನಂದ ಕೆಂಪರಾಜು ಹಾಗೂ ಜೆ.ಜಿ.ನಾಗರಾಜ ಮಧ್ಯೆ ಕಳೆದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ವಿಷಯವಾಗಿ ಮನಸ್ಥಾಪಗಳು ಆರಂಭವಾಗಿತ್ತು. ಈ ಕುರಿತು ಮಂಗಳವಾರ ದಿಢೀರ್ ಜಗಳ ಶುರುವಾಗಿ, ಪ್ರಾಂಶುಪಾಲರು, ಶಿಕ್ಷಕಕರ ಎದುರೆ ಇಬ್ಬರ ಮಧ್ಯೆ ಗಲಾಟೆ, ನಡೆದಿದೆ.
ಕೃಪೆ