ಕೇಂದ್ರ ಸರ್ಕಾರವು 2025ರ ಸಾಲಿಗೆ ಹೊಸ ಹಜ್ ನೀತಿ ಬಿಡುಗಡೆ ಮಾಡಿದೆ. ಹೊಸ ನೀತಿಯ ಪ್ರಕಾರ ಭಾರತೀಯ ಹಜ್ ಸಮಿತಿಯ ಕೋಟಾವನ್ನು ಶೇಕಡಾ 70ಕ್ಕೆ ಇಳಿಸಲಾಗಿದೆ.
ಹೊಸ ನೀತಿಯ ಪ್ರಕಾರ, ಭಾರತಕ್ಕೆ ನಿಗದಿಪಡಿಸಲಾದ ಹಜ್ ಯಾತ್ರಿಕರ ಒಟ್ಟು ಕೋಟಾದ 70 ಪ್ರತಿಶತವನ್ನು ಭಾರತದ ಹಜ್ ಸಮಿತಿ ನಿರ್ವಹಿಸುತ್ತದೆ. ಅದೇ ಸಮಯದಲ್ಲಿ, ಉಳಿದ 30 ಪ್ರತಿಶತ ಕೋಟಾವನ್ನು ಖಾಸಗಿ ಹಜ್ ಗುಂಪು ಸಂಘಟಕರಿಗೆ ನೀಡಲಾಗುತ್ತದೆ. ಕಳೆದ ವರ್ಷದ ಹಜ್ ನೀತಿಯಲ್ಲಿ ಈ ಕೋಟಾ 80-20 ಆಗಿತ್ತು.
ಹಜ್ ಯಾತ್ರೆಯನ್ನು ಇನ್ನಷ್ಟು ಸುಧಾರಿಸಲು ಸರ್ಕಾರ ನೀತಿ ರೂಪಿಸಿದೆ ಎಂದು ಉತ್ತರ ಪ್ರದೇಶ ಹಜ್ ಸಮಿತಿ ಕಾರ್ಯದರ್ಶಿ ಎಸ್.ಪಿ. ತಿವಾರಿ ಹೇಳಿದ್ದಾರೆ.
ಹೊಸ ನೀತಿ ಅಡಿ ಹಜ್ ಸಮಯದಲ್ಲಿ ಸೌದಿ ಅರೇಬಿಯಾದಲ್ಲಿ ಯಾತ್ರಾರ್ಥಿಗಳಿಗೆ ಸಹಾಯ ಮಾಡಲು ಕಳುಹಿಸಲಾದ ಖಾದಿಮುಲ್ ಹುಜ್ಜಾಜ್ ಅಂದರೆ ಹಜ್ ಸೇವಕನ ಪದನಾಮ ಬದಲಾಯಿಸಲಾಗಿದೆ. ಹಜ್ ಸೇವಕರನ್ನು ಈಗ ರಾಜ್ಯ ಹಜ್ ಇನ್ಸ್ ಪೆಕ್ಟರ್ ಎಂದು ಕರೆಯಲಾಗುತ್ತದೆ.