Breaking:

ಮಹಿಳೆಯ ಅಪಹರಣ ಪ್ರಕರಣ; ಹೆಚ್ ಡಿ ರೇವಣ್ಣ, ಭವಾನಿ‌ ಸೇರಿ 9 ಆರೋಪಿಗಳಿಗೆ ಸಮನ್ಸ್

ಮೈಸೂರು ಜಿಲ್ಲೆಯ ಕೆಆರ್​ ನಗರದಲ್ಲಿ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್​ಡಿ ರೇವಣ್ಣ ಮತ್ತು ಭವಾನಿ ರೇವಣ್ಣ ಸೇರಿ 9 ಆರೋಪಿಗಳಿಗೆ ಸಮನ್ಸ್​ ಜಾರಿ ಮಾಡಲಾಗಿದೆ.

ಆರೋಪಿಗಳಿಗೆ ಆಗಸ್ಟ್‌ 28ರಂದು ಖುದ್ದು ಹಾಜರಾಗುವಂತೆ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್​ನಿಂದ ಸಮನ್ಸ್​ ಜಾರಿ ಮಾಡಲಾಗಿದೆ.

ಸತೀಶ್ ಬಾಬು,ಮನುಗೌಡ,ಕೆ.ಎ.ರಾಜಗೋಪಾಲ್, ಹೆಚ್.ಕೆ.ಸುಜಯ್, ಹೆಚ್.ಎನ್.ಮಧು,ಎಸ್.ಟಿ.ಕೀರ್ತಿ ಮತ್ತು ಅಜಿತ್ ಕುಮಾರ್​​ಗೆ ಐಪಿಸಿ ಸೆಕ್ಷನ್​ 364 A ಕೈಬಿಟ್ಟು ಉಳಿದ ಆರೋಪಗಳಿಗೆ ಸಂಬಂಧಿಸಿದಂತೆ ಸಮನ್ಸ್ ನೀಡಲಾಗಿದೆ.

ಆರೋಪಿ ಭವಾನಿ ರೇವಣ್ಣಗೆ ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಪ್ರಶ್ನಿಸಿ ಎಸ್‌ಐಟಿ ಅಧಿಕಾರಿಗಳು, ಸುಪ್ರೀಂಕೋರ್ಟ್‌ಗೆ ಇತ್ತೀಚೆಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ ಭವಾನಿ ರೇವಣ್ಣಾಗೆ ನೊಟೀಸ್ ಜಾರಿ ಮಾಡಿದ್ದರು.



Share this article

ಟಾಪ್ ನ್ಯೂಸ್