Breaking:

ಒಂದೇ ಕುಟುಂಬದ ಮೂವರು ಹೇಮಾವತಿ ನದಿ ಕಾಲುವೆಗೆ ಹಾರಿ ಆತ್ಮಹತ್ಯೆ

ಸಾಲ ವಾಪಸ್ಸು ತೀರಿಸಲಾಗದೆ, ಒಂದೇ ಕುಟುಂಬದ ಮೂವರು ಹೇಮಾವತಿ ನದಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘೋರ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಕೆರೆಬೀದಿಯಲ್ಲಿ ನಡೆದಿದೆ.

ಸಾಲಬಾಧೆ ತಾಳಲಾರದೆ ಪತಿ, ಪತ್ನಿ ಹಾಗೂ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೇಮಾವತಿ ನದಿ ಕಾಲುವೆಗೆ ಹಾರಿ ಪತಿ ಶ್ರೀನಿವಾಸ್, ಪತ್ನಿ ಶ್ವೇತಾ ಹಾಗೂ ಪುತ್ರಿ ನಾಗಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ಮಂಗಳವಾರ ಮೂವರು ಮನೆಯಿಂದ ಕಾಣೆಯಾಗಿದ್ದರು. ಶ್ರೀನಿವಾಸ್ ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.

ಕಾಣೆಯಾದ ಬಳಿಕ ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಆದರೆ ಇಂದು ಹೇಮಾವತಿ ನದಿಯಲ್ಲಿ ಶ್ರೀನಿವಾಸ್ ಹಾಗೂ ಶ್ವೇತ ಮೃತದೇಹ ಪತ್ತೆಯಾಗಿದ್ದು, ಮಗಳು ನಾಗಶ್ರೀ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

Share this article

ಟಾಪ್ ನ್ಯೂಸ್