ಹೆಬ್ರಿ: ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಹೆಬ್ರಿ ತಾಲೂಕಿನ ಶಿವಪುರದ ಹಾಳ್‌ಬೆಟ್ಟು ಎಂಬಲ್ಲಿ ನಡೆದಿದೆ.
ಹಾಳ್‌ಬೆಟ್ಟು ನಿವಾಸಿ ಸಿದ್ವಿಕ್ ಶೆಟ್ಟಿ (16) ಮೃತ ವಿದ್ಯಾರ್ಥಿ.
ಸಿದ್ವಿಕ್ ಶೆಟ್ಟಿ ನಿನ್ನೆ ಸ್ನಾನಕ್ಕೆಂದು ಕೆರೆಗೆ ಹೋಗಿದ್ದಾಗ ಅಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.