ಹೇಮಾ ಸಮಿತಿ ವರದಿಯ ಬೆನ್ನಲ್ಲೇ ಮಾಲಯಾಳಂ ಚಿತ್ರರಂಗದಲ್ಲಿ ಮಹಿಳಾ ಕಲಾವಿದರ ಮೇಲೆ ನಡೆದಿದ್ದ ಒಂದೊಂದೇ ಕೃತ್ಯಗಳು ಬೆಳಕಿಗೆ ಬರುತ್ತಿದೆ. ಈ ಹಿಂದೆ ತಮ್ಮ ಮೇಲಾದ ಕಿರುಕುಳ ಹಾಗೂ ದೌರ್ಜನ್ಯದ ಬಗ್ಗೆ ನಟಿಯರು ಬಹಿರಂಗವಾಗಿ ಹೇಳಿಕೆಯನ್ನು ನೀಡಿ, ಆರೋಪವನ್ನು ಮಾಡುತ್ತಿದ್ದಾರೆ.
ಮಲಯಾಳಂ ನಿರ್ದೇಶಕ ರಂಜಿತ್, ಹಿರಿಯ ನಟ ಸಿದ್ದೀಕ್, ನಟ ರಿಯಾಜ್ ಖಾನ್ ವಿರುದ್ಧ ಅಸಭ್ಯ ವರ್ತನೆ ಹಾಗೂ ಕಿರುಕುಳದ ಆರೋಪ ಮಾಡಲಾಗಿದೆ.
ಮಲಯಾಳಂ ನಟಿ ಮಿನು ಮುನೀರ್ ತನ್ನ ಸಹ ನಟರು ಮತ್ತು ತಂತ್ರಜ್ಞರ ವಿರುದ್ಧ ಆರೋಪಗಳನ್ನು ಮಾಡಿದ್ದು, ಪ್ರಾಜೆಕ್ಟ್‌ಗಾಗಿ ಕೆಲಸ ಮಾಡುವಾಗ ಮೌಖಿಕ ಮತ್ತು ದೈಹಿಕ ನಿಂದನೆಯನ್ನು ಎದುರಿಸಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಸಿಪಿಐ(ಎಂ) ಶಾಸಕರೂ ಆಗಿರುವ ನಟ ಎಂ.ಮುಕೇಶ್ ವಿರುದ್ಧ ಮಹಿಳಾ ನಟಿಯು ಟಿವಿ ಸಂದರ್ಶನವೊಂದರಲ್ಲಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ಬೆನ್ನಿಗೆ ಯುವ ಮೋರ್ಚಾ ಮತ್ತು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಕೊಲ್ಲಂನಲ್ಲಿರುವ ಅವರ ನಿವಾಸದತ್ತ ಮೆರವಣಿಗೆ ನಡೆಸಿದ್ದಾರೆ.