Breaking:

ಹೆಣ್ಣುಮಕ್ಕಳ ವಿವಾಹ ಪ್ರಾಯ 18 ರಿಂದ 21ಕ್ಕೆ ಏರಿಕೆ ಮಾಡಿದ ರಾಜ್ಯ: ಈ ಕುರಿತ ಬಿಲ್ ವಿಧಾನ ಸಭೆಯಲ್ಲಿ ಅಂಗೀಕಾರ

ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 18ರಿಂದ 21ಕ್ಕೇ ಏರಿಕೆ ಮಾಡುವ ಮಸೂದೆಯನ್ನು ಹಿಮಾಚಲ ಪ್ರದೇಶದ ಮುಂಗಾರು ಅಧಿವೇಶನದಲ್ಲಿ ವಿಧಾನಸಭೆ ಅಂಗೀಕರಿಸಿದೆ.
ಇದೀಗ ಅಂತಿಮ ಅನುಮೋಧನೆಗಾಗಿ ಮಸೂದೆಯನ್ನು ರಾಜ್ಯಪಾಲರ ಒಪ್ಪಿಗೆಗೆ ಕಳುಹಿಸಲಾಗಿದೆ.

ಬಾಲ್ಯ ವಿವಾಹ ನಿಷೇಧ ಮಸೂದೆ-2024ನ್ನು ಮಂಗಳವಾರ ವಿಧಾನಸಭೆಯಲ್ಲಿ ಸವಾರ್ನುಮತದಿಂದ ಅಂಗೀಕರಿಸಲಾಗಿದೆ. ಈ ಮೂಲಕ ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 3 ವರ್ಷ ಏರಿಕೆ ಮಾಡಲಾಗಿದೆ.



ಗಂಡು ಮತ್ತು ಹೆಣ್ಣು ನಡುವಿನ ಲಿಂಗ ಸಮಾನತೆ ನೀಡಲು ಇಬ್ಬರ ವಿವಾಹದ ವಯಸ್ಸನ್ನು 21 ವರ್ಷಕ್ಕೆ ಇಡುವುದು ಸರಿಯಾಗಿದೆ ಎಂದು ಸಚಿವ ಧನಿರಾಮ್‌ ಹೇಳಿದ್ದಾರೆ. ಅಲ್ಲದೇ ಚಿಕ್ಕ ವಯಸ್ಸಿನಲ್ಲಿ ಹೆಣ್ಣುಮಕ್ಕಳಿಗೆ ಮದುವೆಯಾದರೆ ಮುಂದೆ ಅವರಿಗೆ ಗರ್ಭಧಾರಣೆ ವೇಳೆ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂದು ಸಚಿವರು ಹೇಳಿದ್ದಾರೆ.

Share this article

ಟಾಪ್ ನ್ಯೂಸ್