Breaking:

ಪುನೀತ್ ಕೆರೆಹಳ್ಳಿ ಗ್ಯಾಂಗ್ ಸೃಷ್ಟಿಸಿದ್ದ ನಾಯಿ ಮಾಂಸ ವಿವಾದಕ್ಕೆ ಪುಲ್ ಸ್ಟಾಪ್; ಹೈದ್ರಾಬಾದ್ ಲ್ಯಾಬ್ ಅಂತಿಮ ವರದಿ ಬಹಿರಂಗ

ಇದ್ರೀಶ್ ಪಾಷಾ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಮತ್ತು ಗ್ಯಾಂಗ್ ಸೃಷ್ಟಿಸಿದ್ದ  ನಾಯಿ ಮಾಂಸ ವಿವಾದಕ್ಕೆ ಕೊನೆಗೆ ಪುಲ್ ಸ್ಟಾಪ್ ಬಿದ್ದಿದೆ.

ಮಾಂಸದ ಮಾದರಿಯನ್ನು ಪರಿಶೀಲಿಸಿ ಹೈದರಾಬಾದ್‌ ಲ್ಯಾಬ್‌ ಅಂತಿಮ ವರದಿಯನ್ನು ನೀಡಿದ್ದು, ಮೆಜೆಸ್ಟಿಕ್‌ ರೈಲು ನಿಲ್ದಾಣದಲ್ಲಿ ಪತ್ತೆಯಾಗಿರುವುದು ಕುರಿ ಮಾಂಸವೇ ಹೊರತು ನಾಯಿ ಮಾಂಸವಲ್ಲ ಎಂದು ಹೇಳಿದೆ.

ಕೆಲ ದಿನಗಳ ಹಿಂದೆ ರಾಜಸ್ಥಾನದಿಂದ ಉದ್ಯಮಿ ಅಬ್ದುಲ್‌ ರಜಾಕ್‌ ತರಿಸುತ್ತಿದ್ದ ಕುರಿ ಮಾಂಸದಲ್ಲಿ ನಾಯಿ ಮಾಂಸವೂ ಮಿಶ್ರಣವಾಗಿರುತ್ತದೆ ಎಂದು ಪುನೀತ್‌ ಕೆರೆಹಳ್ಳಿ ಗ್ಯಾಂಗ್ ರಾದ್ದಾಂತ ಮಾಡಿ ಪೊಲೀಸರ ಕರ್ತವ್ಯ ಕ್ಕೆ ಅಡ್ಡಿಯುಂಟು ಮಾಡಿತ್ತು.

ಹಾಗಾಗಿ ಬಾಕ್ಸ್‌ನಲ್ಲಿದ್ದ ಮಾಂಸದ ಸ್ಯಾಂಪಲ್‌ ಅನ್ನು ಹೈದರಾಬಾದ್‌ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಈಗ ಲ್ಯಾಬ್‌ ವರದಿ ಬಂದಿದ್ದು, ಅದು ಕುರಿ ಮಾಂಸ ಎಂಬುದು ದೃಢವಾಗಿದೆ ಎಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ತಿಳಿಸಿದೆ.

ಹೈದರಾಬಾದ್ ವರದಿ ಬಗ್ಗೆ ಅಬ್ದುಲ್ ರಜಾಕ್ ಪ್ರತಿಕ್ರಿಯಿಸಿ, ನಾವು ಯಾವುದೇ ರೀತಿಯ ಅಕ್ರಮ ವ್ಯವಹಾರ ಮಾಡಿಲ್ಲ. ಕಳೆದ 12 ವರ್ಷದಿಂದ ಈ ವ್ಯವಹಾರ ಮಾಡ್ತಿದ್ದೀವಿ. ರೋಲ್ ಕಾಲ್ ಕೊಡಲ್ಲ ಅಂದಿದ್ದಕ್ಕೆ ಇಲ್ಲ ಸಲ್ಲದ ಆರೋಪ ಮಾಡಿದ್ರು. ಇವತ್ತು ರಿಪೋರ್ಟ್ ಬಂದಿದೆ, ಅದು ಕುರಿ ಮಾಂಸ ಅನ್ನೋದು ಗೊತ್ತಾಗಿದೆ. ಬಿಜೆಪಿಯವರು ಪುನೀತ್ ಕೆರೆಹಳ್ಳಿ ಸಪೋರ್ಟ್ ಗೆ ನಿಂತಿದ್ರು, ಈಗ ಆ ನಾಯಕರು ಏನ್ ಹೇಳುತ್ತಾರೆ ಎಂದು ಪ್ರಶ್ನಿಸಿದರು.

Share this article

ಟಾಪ್ ನ್ಯೂಸ್