Breaking:

ಕಂತೆ ಕಂತೆ ನೋಟುಗಳನ್ನು ರಸ್ತೆಗೆ ಎಸೆದ ಯುವಕ; ವಿಡಿಯೋ ವೈರಲ್

ಯುವಕನೋರ್ವ ಕಂತೆ ಕಂತೆ ನೋಟುಗಳನ್ನು ರಸ್ತೆಗೆ ಎಸೆದಿರುವ ಘಟನೆ ಹೈದರಾಬಾದ್‌ನ ಕುಕಟ್‌ಪಲ್ಲಿಯಲ್ಲಿ ನಡೆದಿದೆ.

ವಾಹನ ದಟ್ಟನೆಯಿರುವ ನಡು ರಸ್ತೆಯಲ್ಲೇ ನಿಂತು ಈ ಯುವಕ ನೋಟುಗಳನ್ನು ರಸ್ತೆಗೆ ಎಸೆದಿದ್ದು, ನೋಟುಗಳ ಸುರಿಮಳೆ ಸುರಿಯುತ್ತಿದ್ದಂತೆ ಅಲ್ಲಿದ್ದ ಜನ ಬಂದು ನೋಡನ್ನು ಹೆಕ್ಕಿಕೊಂಡು ಹೋಗಿದ್ದಾರೆ.

ಸದ್ಯ ವಿಡಿಯೋ ಎಲ್ಲೆಡೆ ಭಾರೀ ವೈರಲ್​​ ಆಗಿದೆ.ಆಗಸ್ಟ್​​​ 21ರಂದು ಹಂಚಿಕೊಂಡಿರುವ ವೀಡಿಯೋ ಒಂದೇ ದಿನದಲ್ಲಿ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

ವೈರಲ್​​ ಆಗಿರುವ ವಿಡಿಯೋದಲ್ಲಿ ಯುವಕ ಎರಡೂ ಕೈಗಳಲ್ಲಿ ಕಂತೆ ಕಂತೆ ನೋಟುಗಳನ್ನು ಇಟ್ಟುಕೊಂಡು ರಸ್ತೆಯ ವಾಹನ ಸಂಚಾರದ ನಡುವೆಯೂ ಹಣ ಎಸೆಯುತ್ತಿರುವುದು ಸೆರೆಯಾಗಿದೆ.ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ನೆಟ್ಟಿಗರು ಯುವಕನಿಗೆ ವಿಭಿನ್ನವಾಗಿ ಕಮೆಂಟ್ ಮಾಡಿದ್ದಾರೆ.

Share this article

ಟಾಪ್ ನ್ಯೂಸ್