Breaking:

ಮನೆಯ ಮೇಲೆ ಕಲ್ಲು ಎಸೆತ; ಐವನ್ ಡಿಸೋಜಾ ಹೇಳಿದ್ದೇನು ಗೊತ್ತಾ?

ತನ್ನ ಮನೆಯ ಮೇಲೆ ಕಲ್ಲು ಎಸೆತ ಪ್ರಕರಣಕ್ಕೆ ಸಂಬಂಧಿಸಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಪ್ರತಿಕ್ರಿಯಿಸಿದ್ದಾರೆ.

ಕೆಲವರು ನನ್ನ ಮನೆಗೆ ದಾಳಿಯಾಗಿದ್ದು ತಡವಾಯ್ತು ಅಂತಾ ಹೇಳಿದ್ದಾರೆ. ಅಂಥವರಿಗೆ ನಾನು ಶುಭ ಕೋರುತ್ತೇನೆ.ನನ್ನ ಮನೆಗೆ ಕಲ್ಲು ತೂರಬಹುದು
ಆದರೆ ಐವನ್ ಡಿಸೋಜಾ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇಂತದ್ದಕ್ಕೆಲ್ಲ ಜಗ್ಗಲ್ಲ ಎಂದು ಹೇಳಿದ್ದಾರೆ.

ಭರತ್ ಶೆಟ್ಟಿ ಹಿಂದೆ ರಾಹುಲ್ ಗಾಂಧಿಯವರ ಕಪಾಳಕ್ಕೆ ಬಾರಿಸಬೇಕು ಎಂದಿದ್ದರು. ವೇದವ್ಯಾಸ ಕಾಮತ್ ಜೆರೋಸಾ ಶಾಲೆಯಲ್ಲಿ ಗಲಾಟೆ ಮಾಡಿದ್ರು. ಇದೆಲ್ಲ ಈ ಅವರಿಗೆ ಆ ಮಕ್ಕಳ ಶಾಪ ಅಲ್ಲದೆ ಮತ್ತೇನೂ ಅಲ್ಲ. ಜನರ ತೆರಿಗೆ ಹಣ ಉಂಡು ತಿಂದು ಅವರ ವಿರುದ್ಧವೇ ಮಾತನಾಡ್ತಾರೆ. ನನ್ನ ವಿರುದ್ಧ ಕಾನೂನು ಮೊರೆ ಹೋಗಿ ಅದು ಬಿಟ್ಟು ಮನೆಗೆ ಕಲ್ಲು ಎಸೆಯೋದಲ್ಲ ಎಂದು ಹೇಳಿದ್ದಾರೆ.

ಇವರದು ಗೂಂಡಾ ಸಂಸ್ಕೃತಿ, ಇದು ಮಂಗಳೂರಿನ ಸಂಸ್ಕೃತಿ ಅಲ್ಲ. ಬಿಜೆಪಿಯವರಿಗೆ ಗಲಭೆ, ಕೊಲೆ, ಗುಂಪು ಘರ್ಷಣೆ ಆದರೆ ಪ್ರಯೋಜನ. ಅಲ್ಪಸಂಖ್ಯಾತರು ಅವರ ಲಿಸ್ಟ್ ನಲ್ಲಿ ಇಲ್ಲ, ಹಾಗಾಗಿ ನಮ್ಮ ಮೇಲೆ ಹೊಟ್ಟೆ ಕಿಚ್ಚು ಹೆಚ್ಚು ಎಂದು ಹೇಳಿದ್ದಾರೆ.

Share this article

ಟಾಪ್ ನ್ಯೂಸ್