Breaking:

ಇಸ್ರೇಲ್ ಮೇಲೆ ಹಿಜ್ಬುಲ್ಲಾದಿಂದ ರಾಕೆಟ್ ದಾಳಿ

ಇಸ್ರೇಲ್ -ಹಮಾಸ್ ಮೇಲೆ ಕಳೆದ 9 ತಿಂಗಳಿಂದ ಯುದ್ಧ ನಡೆಸುತ್ತಿದೆ. ಈ ಮಧ್ಯೆ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅವರನ್ನು ಟೆಹ್ರಾನ್‍ನಲ್ಲಿ ಹತ್ಯೆ ಮಾಡಲಾಗಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಹಿಜ್ಬುಲ್ಲಾ ಮಿಲಿಟರಿ ನಾಯಕ ಫೌದ್ ಶುಕ್ರ್ ಅವರ ಹತ್ಯೆ ಬೈರೂತ್ ನಲ್ಲಿ  ನಡೆದಿತ್ತು.

ಇದರಿಂದಾಗಿ ಇದೀಗ ಮಧ್ಯ ಪ್ರಾಚ್ಯದಲ್ಲಿ ಮತ್ತೊಂದು ಯುದ್ಧದ ಕಾರ್ಮೋಡ ಕವಿದಿದೆ. ಇರಾನ್ ಬೆಂಬಲಿತ ಸೇನಾಪಡೆ ಹೆಜ್ಬೊಲ್ಲಾದ ಕಮಾಂಡರ್ ಫೌದ್ ಶುಕ್ರ್ ನನ್ನು ಇಸ್ರೇಲ್ ರಕ್ಷಣಾ ಪಡೆ ನಡೆಸಿದ ವಾಯು ದಾಳಿಯಲ್ಲಿ ಮೃತಪಟ್ಟ ಬೆನ್ನಲ್ಲೇ ಇಸ್ರೇಲ್ ವಿರುದ್ಧ ಪ್ರತಿಕಾರಕ್ಕೆ ಇರಾನ್ ಹವಣಿಸುತ್ತಿದೆ.

ಈ ಮಧ್ಯೆ  ಲೆಬಾನಾನ್ ನ ಹಿಜ್ಬುಲ್ಲಾ ಗುಂಪು ಶನಿವಾರ ಇಸ್ರೇಲ್‍ನ ಮೇಲೆ ಹಲವು ಕತ್ಯುಷಾ ಕ್ಷಿಪಣಿಗಳನ್ನು ಸಿಡಿಸಿದೆ.

Share this article

ಟಾಪ್ ನ್ಯೂಸ್