ಮಾಂಸ ಮಾರಾಟ ಮಾಡುವ ಅಂಗಡಿಗಳಲ್ಲಿ ಹಲಾಲ್ ಅಥವಾ ಝಟಕಾ ಮಾಂಸ ಎಂದು ಅಂಗಡಿಯ ಮೇಲೆ ಬರೆಯುವುದು ಕಡ್ಡಾಯಗೊಳಿಸುವುದಾಗಿ ಜೈಪುರ ಮೇಯರ್ ಡಾ.ಸೌಮ್ಯ ಗುರ್ಜರ ಹೇಳಿದ್ದಾರೆ.
ಜೈಪುರ ಮಹಾನಗರಪಾಲಿಕೆಯು ಮಾಂಸ ಮಾರಾಟ ಮಾಡುವ ಎಲ್ಲಾ ಅಂಗಡಿಳಿಗೆ ಈ ಬಗ್ಗೆ ಆದೇಶ ನೀಡಿದೆ ಎನ್ನಲಾಗಿದೆ.
ಜೈಪುರದ ಜನರು ಅನೇಕ ಬಾರಿ ನನ್ನ ಬಳಿ ಈ ಬಗ್ಗೆ ದೂರುಗಳನ್ನು ನೀಡಿದ್ದಾರೆ. ಮಾಂಸದ ಅಂಗಡಿಯ ಬಳಿ ಕಸವನ್ನು ಎಸೆಯುತ್ತಿರುವುದರಿಂದ ನಾಗರಿಕರಿಗೆ ತುಂಬಾ ತೊಂದರೆಯಾಗುತ್ತಿದೆಯೆಂದೂ ದೂರುಗಳು ಬಂದಿವೆ. ಇತ್ತೀಚೆಗೆ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಮಾಂಸ ಮಾರಾಟ ಮಾಡುವ ಅಂಗಡಿಗಳು ವಸತಿ ಪ್ರದೇಶದಿಂದ ಹೊರಗಿರಬೇಕು ಎಂದು ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ನಾನು ಸ್ವತಃ ಶಾಖಾಹಾರಿಯಾಗಿದ್ದೇನೆ, ದುರ್ಗಂಧವನ್ನು ಸಹಿಸಲು ಸಾಧ್ಯವಾಗುವುದಿಲ್ಲ. ನನಗಾಗುವಂತಹ ಸಮಸ್ಯೆ ಇತರ ಅನೇಕ ನಾಗರಿಕರಿಗೂ ಆಗುತ್ತಿರಬಹುದು ಎಂದು ಮೇಯರ್ ಹೇಳಿದ್ದಾರೆ.