ಜಪಾನ್ ನ ಕ್ಯೂಶು ಪ್ರದೇಶದ ಮಿಯಾಝಾಕಿ ಪ್ರಾಂತ್ಯದ ಕರಾವಳಿಯಲ್ಲಿ ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪನವು ಸಂಭವಿಸಿದೆ.
ಭೂಕಂಪನದ ಜೊತೆ ಸುನಾಮಿ ಎಚ್ಚರಿಕೆಯನ್ನು ಕೂಡ ನೀಡಲಾಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸೂಚನೆ ನೀಡಲಾಗಿದೆ.
ದಕ್ಷಿಣ ಜಪಾನಿನ ಕ್ಯೂಶು ದ್ವೀಪದಾದ್ಯಂತ ಭೂಕಂಪನದ ಅನುಭವವಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಭೂಕಂಪ ಸಂಭವಿಸಿದ ಸ್ಥಳದಲ್ಲಿನ ಸಾವು- ನೋವುಗಳ ಬಗ್ಗೆ ಮಾಹಿತಿ ಲಭ್ಯವಾಗಬೇಕಿದೆ.