Breaking:

ಉದ್ಘಾಟನೆ ಭಾಗ್ಯವಿಲ್ಲದೆ ಭೂತ ಬಂಗಲೆಯಂತಾದ ಕೋಟ್ಯಾಂತರ ವೆಚ್ಚದಲ್ಲಿ ನಿರ್ಮಿಸಿದ ಸಮುದಾಯ ಭವನ

ಬಡವರು,ಮಧ್ಯಮವರ್ಗದ ಜನರ ಕಾರ್ಯಕ್ರಮಗಳಿಗೆ ಅಂತಾ ಕೋಟಿ ಕೋಟಿ ರೂ.ವೆಚ್ಚದಲ್ಲಿ ಜಯನಗರದಲ್ಲಿ ನಿರ್ಮಿಸಿರುವ ಬಿಬಿಎಂಪಿಯ (BBMP) ಸಮುದಾಯಭವನ ಉದ್ಘಾಟನೆ ಭಾಗ್ಯ ಸಿಗದೇ ಗಬ್ಬೆದ್ದುನಾರುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ‌.

ಭೂತಬಂಗಲೆಯಂತಾದ ಬಿಬಿಎಂಪಿಯ ಸಮುದಾಯ ಭವನ
ಜಯನಗರದಲ್ಲಿ 3.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಈ ಕಟ್ಟಡ 2020ರಲ್ಲೇ ಉದ್ಘಾಟನೆಯಾಗಬೇಕಿತ್ತು, ಆದರೆ ಮಾಜಿ ಶಾಸಕಿ ಸೌಮ್ಯರೆಡ್ಡಿ ಹಾಗೂ ಹಾಲಿ ಶಾಸಕ ಸಿ.ಕೆ.ರಾಮಮೂರ್ತಿ ಜಿದ್ದಾಜಿದ್ದಿನಿಂದ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ಸಿಗದೆ ಭೂತಬಂಗಲೆಯಂತಾಗಿದೆ ಎಂದು ವರದಿಯಾಗಿದೆ.

ಜಯನಗರ ಸುತ್ತಮುತ್ತಲಿನ ಜನರಿಗೆ ಕಾರ್ಯಕ್ರಮಗಳು, ಸಮಾರಂಭ ನಡೆಸೋಕೆ ಸಹಾಯವಾಗಲಿ ಅಂತಾ ಸೌಮ್ಯರೆಡ್ಡಿ ಶಾಸಕಿಯಾಗಿದ್ದ ವೇಳೆ ಈ ಕಟ್ಟಡದ ಕಾಮಗಾರಿ ನಡೆಸಲಾಗಿತ್ತು. ಬಿಬಿಎಂಪಿಯ ಅನುದಾನದಿಂದ 3.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಕಟ್ಟಡ ಬಳಿಕ ಬಂದ ಶಾಸಕ ರಾಮಮೂರ್ತಿ ಅವಧಿಯಲ್ಲಿ ಕಾಮಗಾರಿ ಮುಗಿದ್ರೂ ರಾಜಕೀಯ ಒಳಮುನಿಸಿನಿಂದ ಕಟ್ಟಡ ಉದ್ಘಾಟನೆಯಾಗಿಲ್ಲ ಅಂತಾ ಸ್ಥಳೀಯರು ಆರೋಪಿಸ್ತಿದ್ದಾರೆ.

ಸದ್ಯ ಕೋಟ್ಯಾಂತರ ರೂ ವೆಚ್ಚದ ಈ ಸಮುದಾಯ ಭವನ ಕಟ್ಟಡ, ಕುಡುಕರು, ಪುಂಡರ ತಾಣವಾಗಿದ್ದು, ಜನರ ತೆರಿಗೆ ಹಣ ವ್ಯರ್ಥ ಮಾಡಿರೋ ಪಾಲಿಕೆ ವಿರುದ್ಧ ಜನರು ಕಿಡಿಕಾರುತ್ತಿದ್ದಾರೆ.

ಸದ್ಯ ಹೊಸ ಕಟ್ಟಡದ ಕಿಟಕಿ ಗಾಜುಗಳು ಕೂಡ ಪುಡಿಪುಡಿಯಾಗಿದ್ದು, ಕೋಟಿ ಕೋಟಿ ರೂ. ಹಣ ವ್ಯಯಿಸಿ ನಿರ್ಮಿಸಿದ್ದ ಕಟ್ಟಡ ಉದ್ಘಾಟನೆಗೂ ಮೊದಲೇ ಭೂತಬಂಗಲೆಯಂತಾಗಿದೆ.

Share this article

ಟಾಪ್ ನ್ಯೂಸ್