ತಂದೆ ಮಾಡಿದ್ದ ಸಾಲಕ್ಕೆ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ಭದ್ರಾವತಿಯ ಪೇಪರ್ ಟೌನ್ ಬಡಾವಣೆಯಲ್ಲಿ ನಡೆದಿದ್ದು, ಘಟನೆಯಲ್ಲಿ ಮನನೊಂದು ಹಲ್ಲೆಗೊಳಗಾದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ.
ಸ್ವೀಪನ್ ತಂದೆ ಜೋಸೆಫ್ ಅವರು ಪರಶುರಾಮ್ ಎಂಬುವರ ಬಳಿ 2 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಪಡೆದುಕೊಂಡು ತೀರಿಸಲಾಗದೇ ಜೋಸೆಫ್ ಮನೆ ಬಿಟ್ಟು ಹೊರ ರಾಜ್ಯಕ್ಕೆ ತೆರಳಿದ್ದರು.
ಸಾಲ ವಸೂಲಿಗಾಗಿ ಸ್ಟೀಪನ್ ಗೆ ಕರೆದುಕೊಂಡು ಹೋಗಿ ಪರಶುರಾಮ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ಮನನೊಂದ ಸ್ಟೀಪನ್ ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ಕುರಿತು ಪೇಪರ್ ಟೌನ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.