ಅಳುತ್ತಾ ಕೊನೆಯ ವಿಡಿಯೋ ಪೋಸ್ಟ್ ಮಾಡಿದ ಪತ್ರಕರ್ತೆ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಒಡಿಶಾದಲ್ಲಿ ನಡೆದಿದೆ.
ಒಡಿಶಾದ ಖ್ಯಾತ ವೆಬ್ ಚಾನೆಲ್‌ನಲ್ಲಿ ಪತ್ರಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದ ಮುಧುಮಿತಾ ಪರಿದಾ ಆತ್ಮಹತ್ಯೆ ಮಾಡಿಕೊಂಡವರು. ಮದುವೆಯಾದ ನಾಲ್ಕೇ ತಿಂಗಳಲ್ಲಿ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊನೆಯ ವಿಡಿಯೋದಲ್ಲಿ ಪತ್ರಕರ್ತೆ ಹೇಳಿದ್ದೇನು?
ಅಮ್ಮಾ ಕ್ಷಮಿಸಿಬಿಡು, ನನ್ನ ನಿರ್ಧಾರದ ಕುರಿತು ತೀವ್ರ ವಿಷಾಧ ವ್ಯಕ್ತಪಡಿಸುತ್ತಿದ್ದೇನೆ. ಎಲ್ಲರಲ್ಲೂ ಕ್ಷಮೆ ಕೇಳುತ್ತಿದ್ದೇನೆ. ಈ ಜಗತ್ತಿನಲ್ಲಿ ಈ ರೀತಿಯ ಕಪಟ ವ್ಯಕ್ತಿಗಳಿದ್ದಾರೆ ಅನ್ನೋದು ಗೊತ್ತಿರಲಿಲ್ಲ. 5 ವರ್ಷಗಳ ಕಾಲ ಪ್ರೀತಿ, ಎಲ್ಲರನ್ನೂ ಒಪ್ಪಿಸಿ ಮದುವೆಯಾಗಿದ್ದೇನೆ. ಮಾರ್ಚ್ 1 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೆ. ಆದರೆ ನಾನು ಪ್ರೀತಿ, ನನ್ನ ಕೈಹಿಡಿದ ಸಂಗಾತಿಯೇ ನನಗೆ ಮೋಸ ಮಾಡಿದ್ದಾನೆ. ಆತನಿಗೆ ಬೇರೊಬ್ಬ ಮಹಿಳೆ ಜೊತೆ ಸಂಬಂಧವಿದೆ. ರಾತ್ರಿಯೆಲ್ಲಾ ಫೋನ್ ಮೂಲಕ ಮಾತನಾಡುತ್ತಾನೆ. ನನ್ನ ಗೆಳತಿಯರು, ಆತನ ಗೆಳೆತಿಯರ ಜೊತೆಗೂ ರಾತ್ರಿ 12 ಗಂಟೆಯಲ್ಲೂ ಮಾತನಾಡುತ್ತಾನೆ. ಈ ವಿಚಾರ ನನಗೆ ತಿಳಿಯುತ್ತಿದ್ದಂತೆ ಆತನ ಪ್ರಶ್ನೆ ಮಾಡಿದ್ದೇನೆ. ಈ ವೇಳೆ ನಿನ್ನ ಜೊತೆ ಬದುಕಲು ಸಾಧ್ಯವಿಲ್ಲ ಎಂದಿದ್ದಾನೆ. ನಾನು ಪ್ರೀತಿಸಿ ಮದುವೆಯಾದ ವ್ಯಕ್ತಿಯೇ ಹಿಗೇಂದಾಗ ನನ್ನ ಮುಂದೆ ಬೇರೆ ಆಯ್ಕೆ ಇಲ್ಲ ಎಂದು ಹೇಳಿದ್ದಾರೆ.
ಕೊನೆಯ ವಿಡಿಯೋ ಪೋಸ್ಟ್ ಮಾಡಿದ ಮಧುಮಿತಾ ಭುವನೇಶ್ವರ ನಗರದ ಬಾಪೂಜಿ ನಗರ ನಿಲ್ದಾಣ ಪಕ್ಕದಲ್ಲಿ ರೈಲ್ವೇ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ರೈಲ್ವೇ ಪೊಲೀಸರು ಮೃತದೇಹ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.