ಕಲ್ಲಡ್ಕ: ಯುವಕನೋರ್ವ ಕಳೆದ ಐದು ದಿನಗಳಿಂದ ನಾಪತ್ತೆಯಾಗಿರುವ ಘಟನೆ ಬಂಟ್ವಾಳ ತಾಲೂಕಿನ ಕಲ್ಲಡ್ಕ ಮಾಣಿಮಜಲು ಎಂಬಲ್ಲಿ ನಡೆದಿದೆ.
ಸಮದ್ ನಾಪತ್ತೆಯಾದ ಯುವಕನಾಗಿದ್ದಾನೆ. ಇವರು ಸಂತೆಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಇತ್ತೀಚೆಗೆ ಮಳೆಯಿಂದ ಸಂತೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಧವಸ ದಾನ್ಯಗಳಿಗೆ ಹಾನಿಯಾಗಿತ್ತು. ಇದರಿಂದ ನೊಂದು ಕೊಂಡಿದ್ದರು ಎಂದು ಕಟುಂಬ ಮೂಲಗಳು ಹೇಳುತ್ತಿದೆ.
ಸಮದ್ ವಿವಾಹಿತರಾಗಿದ್ದು, ಅವರಿಗೆ ಮೂವರು ಮಕ್ಕಳಿದ್ದಾರೆ. ತಂದೆ ನಾಪತ್ತೆ ಬಳಿಕ ಕುಟುಂಬ ಕಂಗಾಲಾಗಿದೆ. ಸಮದ್ ಅವರನ್ನು ಎಲ್ಲಿಯಾದರೂ ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ಅವರ ಕುಟುಂಬ ವರ್ಗವು ಆಗ್ರಹಿಸಿದೆ.
ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಮದ್ ಅವರನ್ನು ಕಂಡು ಬಂದಲ್ಲಿ ಬಂಟ್ವಾಳ ಟೌನ್ ಪೋಲಿಸ್ ಠಾಣೆಗೆ ತಿಳಿಸಿ ಇಲ್ಲವೇ ಕೆಳಗಿನ ಸಂಖ್ಯೆಗೆ ಕರೆ ಮಾಡುವಂತೆ ಕುಟುಂಬದ ಮೂಲಗಳು ಮನವಿ ಮಾಡಿಕೊಂಡಿದೆ.
+91 90082 18612
Nawaz NK
+91 9901090586
IRFAN Kalladka