ಕಾರ್ಕಳ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಮೂರನೇ ಆರೋಪಿ ಕಾರ್ಕಳ ತೆಲ್ಲರು ನಿವಾಸಿ ಅಭಯ್ ನನ್ನು ಬಂಧಿಸಲಾಗಿದೆ. ಈತ ಬಿಜೆಪಿ ಮತ್ತು ಭಜರಂಗದಳದ ಕಾರ್ಯಕರ್ತ ಎಂದು ವರದಿಯಾಗಿದೆ.
ಅಭಯ್ ಕಾಪುವಿನ ವ್ಯಕ್ತಿಯೊಂದಿಗೆ ಸೇರಿಕೊಂಡು ಟಿಪ್ಪರ್ ಖರೀದಿಸಿದ್ದ ಆದರೆ ಲೋನ್ ಕಂತು ಬಾಕಿ ಇರಿಸಿದ್ದ ಕಾರಣ ಆತನ ವಾಹನವನ್ನು ಫೈನಾನ್ಸ್ ಕಂಪನಿ ಮುಟ್ಟುಗೋಲು ಹಾಕಿಕೊಂಡ ನಂತರ ಬೆಂಗಳೂರಿನಲ್ಲಿ ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಅಲ್ತಾಫ್ ಹಾಗೂ ಅಭಯ್ ಇಬ್ಬರೂ ಕಾರ್ಕಳ ಜೋಡುರಸ್ತೆ ಬಳಿ ಟಿಪ್ಪರ್ ನಿಲ್ಲಿಸುತ್ತಿದ್ದರು. ಇವರಿಬ್ಬರ ಮಧ್ಯೆ ಸ್ನೇಹ ಬೆಳೆದಿತ್ತು ಎಂದು ತಿಳಿದು ಬಂದಿದೆ.
ಇನ್ನು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಅಲ್ತಾಪ್ ಮತ್ತು ಇನ್ನೋರ್ವ ಆರೋಪಿಗೆ ಪೊಲೀಸರು ಬಂಧಿಸಿದ್ದಾರೆ. ಈವರೆಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.