Breaking:

ಕಾರ್ಕಳ; ಓಮ್ನಿ- ಆಲ್ಟೋ ಕಾರಿನ ನಡುವೆ ಅಪಘಾತ; ಓರ್ವನ ಸ್ಥಿತಿ ಗಂಭೀರ

ಕಾರ್ಕಳ: ಓಮಿನಿ ಮತ್ತು ಆಲ್ಟೊ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ  ಓರ್ವ ಗಂಭೀರವಾಗಿ ಗಾಯಗೊಂಡು ಇತರ ಮೂವರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಸಾಣೂರು ಕೋಳಿ ಫಾರಂ ಬಳಿ ನಡೆದಿದೆ.

ಅಪಘಾತದಲ್ಲಿ ಓಮಿನಿ ಕಾರಿನಲ್ಲಿದ್ದ ಮೂಡಬಿದ್ರೆ ನಿವಾಸಿಗಳಾದ ಆಫ್ರಿದ್, ಗಂಭೀರವಾಗಿ ಗಾಯಗೊಂಡಿದ್ದು,  ಅನ್ವಿಸ್, ಅಶ್ವಿನ್ ಮತ್ತು ಅಗ್ಮ  ಗಾಯಗೊಂಡಿದ್ದಾರೆ.

ಮೂಡುಬಿದಿರೆಯಿಂದ ಕಾರ್ಕಳದ ರೆಸಾಟ್೯ ಕಡೆಗೆ ಬರುತ್ತಿದ್ದ ಓಮಿನಿ ಕಾರು ಹಾಗೂ ಕಾರ್ಕಳದಿಂದ ಮೂಡುಬಿದಿರೆ ಕಡೆಗೆ ಹೋಗುತ್ತಿದ್ದ ಆಲ್ಟೋ ಕಾರು ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿ ಸಿಲುಕಿದ್ದ ಆಫ್ರಿದ್ ಅವರನ್ನು ಕ್ರೇನ್ ಮೂಲಕ ಹೊರತೆಗೆಯಲಾಗಿದೆ. ಅಪ್ರೀದ್ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ..

 

Share this article

ಟಾಪ್ ನ್ಯೂಸ್