ಕಾರ್ಕಳದಲ್ಲಿ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಆರೋಪಿ ಅಲ್ತಾಫ್ ತಾಯಿ ಆಯಿಷಾ ಪ್ರತಿಕ್ರಿಯೆ ನೀಡಿದ್ದು, ನನ್ನ ಮಗ ದುಡಿಯುತ್ತಾನೆ ರಾತ್ರಿ 12 ಗಂಟೆಗೆ ಬರುತ್ತಾನೆ. ನನಗೆ ಈ ಘಟನೆ ಬಗ್ಗೆ ಏನೂ ಗೊತ್ತಿಲ್ಲ. ಪೊಲೀಸರು ನಮ್ಮ ಬಳಿ ಏನೂ ಕೇಳಿಲ್ಲ. ನಮ್ಮ ಊರು ತೀರ್ಥಹಳ್ಳಿ. ನನ್ನ ಮಗ ಮರಳಿನ ವ್ಯಾಪಾರ ಮಾಡುತ್ತಿದ್ದಾನೆ, ಮದುವೆಯಾಗಿದೆ. ಎರಡು ಮಕ್ಕಳು ಇದ್ದಾರೆ. ಘಟನೆ ನಡೆದ ಮೇಲೆ ನಾವು ಪೊಲೀಸ್ ಠಾಣೆಗೆ ಹೋದಾಗ ಮತ್ತೆ ಫೋನ್ ಮಾಡುತ್ತೇವೆ ಎಂದಿದ್ದಾರೆ. ಮಗ ಅತ್ಯಾಚಾರ ಮಾಡಿದ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಇನ್ನು ಅತ್ಯಾಚಾರ ಘಟನೆ ಬಗ್ಗೆ ಅಲ್ತಾಫ್ ಸಹೋದರ ಕೂಡ ಪ್ರತಿಕ್ರಿಯೆ ನೀಡಿದ್ದು, ನನ್ನ ತಮ್ಮ ಅಲ್ತಾಫ್ ಸಿಗರೇಟು ಕೂಡ ಸೇದುತ್ತಿರಲಿಲ್ಲ. ಗೆಳೆಯರು ಒತ್ತಾಯ ಮಾಡಿ ಅವನಿಗೆ ದುಶ್ಚಟ ಕಲಿಸಿದ್ದಾರೆ. ಡ್ರಗ್ಸ್ ತೆಗೆದುಕೊಳ್ಳುತ್ತಿದ್ದ ವಿಚಾರ ನನಗೆ ಗೊತ್ತಿಲ್ಲ. ಅವನು ಏನು ತಿನ್ನುವುದಿಲ್ಲ, ಏನೂ ಮಾಡುವುದಿಲ್ಲ.ಅವನ ಜೊತೆಗಿದ್ದವರು ಅವನನ್ನು ಹಾಳು ಮಾಡಿದ್ದಾರೆ ಎಂದು ಹೇಳಿದ್ದಾರೆ.