Breaking:

ಕಾರ್ಕಳದಲ್ಲಿ ವಿವಾದಾತ್ಮಕ ಬ್ಯಾನರ್ ಅಳವಡಿಸಿದ ಕಿಡಿಗೇಡಿಗಳು

ಕಾರ್ಕಳ: ಕಾರ್ಕಳದಲ್ಲಿ ವಿವದಾತ್ಮಕ ಬ್ಯಾನರ್ ವೊಂದು ಪತ್ತೆಯಾಗಿದ್ದು, ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ.

ಸಾಣೂರು ಗ್ರಾಮದ ಕಮಲಾಕ್ಷ ನಗರ ಎಂಬಲ್ಲಿ “ಹಿಂದೂ ಹೆಣ್ಣು ಮಕ್ಕಳ ತಂಟೆಗೆ, ಮೈ ಮುಟ್ಟಲು ಬಂದ ಪೊರ್ಕಿ ಮುಂಡು ಬ್ಯಾರಿಗಳೇ ಹುಷಾರ್! ಜಾಗ್ರತೆ ಎಂದು ಸತೀಶ್, ಒನ್ ಆಫ್ ದಿ ಫ್ರೀಡಂ ಫೈಟರ್ ಎಂಬ ಹೆಸರಿನಲ್ಲಿ ಕಿಡಿಗೇಡಿಗಳು ಬ್ಯಾನರ್ ಅಳವಡಿಸಿದ್ದಾರೆ. ಇದು ಸಮಾಜದಲ್ಲಿ ಸಾಮರಸ್ಯ ಹದಗೆಡಿಸಲು ಮಾಡಿರುವ ಕುತಂತ್ರ ಎನ್ನುವುದನ್ನು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕಾರ್ಕಳ ಸಾಣೂರು ಗ್ರಾಮದ ಮುರತಂಗಡಿ ಕಮಲಾಕ್ಷ ನಗರ ಎಂಬಲ್ಲಿ ಅಳವಡಿಸಿರುವ ಬ್ಯಾನರ್‌ ನಲ್ಲಿ ಮುದ್ರಣಗೊಂಡ ಹೆಸರಿನ 50 ವರ್ಷದ ವ್ಯಕ್ತಿ ಕೂಲಿ ಕಾರ್ಮಿಕನಾಗಿದ್ದು, ಕಳೆದ ಐದಾರು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಈತನನ್ನು ಹೆಂಡತಿ ಮಕ್ಕಳು ಬಿಟ್ಟು ಹೋಗಿದ್ದಾರೆ. ಈತ ತನ್ನ ತಮ್ಮಂದಿರೊಂದಿಗೆ ವಾಸವಾಗಿದ್ದು, ಇಂತಹ ಕೃತ್ಯ ನಡೆಸಲು ಸಾಧ್ಯವಿಲ್ಲ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಯಾರೋ ಈತನ ಹೆಸರಿನಲ್ಲಿ ಬ್ಯಾನರ್ ಹಾಕಿರಬಹುದು ಎಂದು ಶಂಕೆಯನ್ನು ವ್ಯಕ್ತಪಡಿಸಲಾಗಿದೆ.

Share this article

ಟಾಪ್ ನ್ಯೂಸ್