ಕರ್ನಾಟಕ ಪೌರಾಡಳಿತ ನಿರ್ದೇಶನಾಲಯವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
2 ಪ್ರಥಮ ವಿಭಾಗದ ಕಂದಾಯ ನಿರೀಕ್ಷಕ ಮತ್ತು ದ್ವಿತೀಯ ವಿಭಾಗದ ಸಹಾಯಕ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.
ಜುಲೈ 20, 2024 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಳಗಾವಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಹುದ್ದೆಯ ಮಾಹಿತಿ:
ಪ್ರಥಮ ವಿಭಾಗದ ಕಂದಾಯ ನಿರೀಕ್ಷಕ- 1
ದ್ವಿತೀಯ ವಿಭಾಗದ ಸಹಾಯಕ – 1
ವಿದ್ಯಾರ್ಹತೆ:
ಪ್ರಥಮ ವಿಭಾಗದ ಕಂದಾಯ ನಿರೀಕ್ಷಕ- ಪದವಿ
ದ್ವಿತೀಯ ವಿಭಾಗದ ಸಹಾಯಕ – ಪಿಯುಸಿ
ವೇತನ:
ಪ್ರಥಮ ವಿಭಾಗದ ಕಂದಾಯ ನಿರೀಕ್ಷಕ- ಮಾಸಿಕ 27,650-52,650
ದ್ವಿತೀಯ ವಿಭಾಗದ ಸಹಾಯಕ – ಮಾಸಿಕ 21,400-42,000
ಉದ್ಯೋಗದ ಸ್ಥಳ:
ಕಲಬುರಗಿ
ಬೆಳಗಾವಿ
ವಯೋಮಿತಿ:
ಕರ್ನಾಟಕ ಪೌರಾಡಳಿತ ನಿರ್ದೇಶನಾಲಯ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜನವರಿ 1, 2024ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಆಯ್ಕೆ ಪ್ರಾಧಿಕಾರ ಮತ್ತು ನಿರ್ದೇಶಕರು
ಪೌರಾಡಳಿತ ನಿರ್ದೇಶನಾಲಯ
9ನೇ ಮಹಡಿ
ವಿಶ್ವೇಶ್ವರಯ್ಯ ಮುಖ್ಯ ಗೋಪುರ
ಡಾ. ಅಂಬೇಡ್ಕರ್ ವೇದಿಕೆ
ಬೆಂಗಳೂರು-560001
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 20/06/2024
ಅರ್ಜಿ ಸಲ್ಲಿಸಲು ಕೊನೆಯ ದಿನ: ಜುಲೈ 20, 2024