Breaking:

ಕಾಸರಗೋಡು; ಅಪಘಾತದಲ್ಲಿ ಯುವಕ ಮೃತ್ಯು

ಅಹಮ್ಮದ್ ಕಬೀರ್ ಮೃತ ಯುವಕ

ಕಾಸರಗೋಡು;ಬೈಕ್ ಮತ್ತು ಕಾರು ನಡುವೆ ಉಂಟಾದ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ಚೆರ್ಕಳ ಕೆ.ಕೆ ಪುರದಲ್ಲಿ ನಡೆದಿದೆ.

ಕುಂಬಳೆ ಮೊಗ್ರಾಲ್ ಖುತುಬಿ ನಗರದ ಅಹಮ್ಮದ್ ಕಬೀರ್ (30)ಮೃತಪಟ್ಟವರು. ಸಂಬಂಧಿಕರೊಬ್ಬರ ವಿವಾಹ ಆಮಂತ್ರಣಕ್ಕೆ ತೆರಳಿ ಮರಳುತ್ತಿದ್ದಾಗ ಈ ಅಪಘಾತ ನಡೆದಿದೆ

ಗಂಭೀರ ಗಾಯಗೊಂಡ ಕಬೀರ್ ರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿತ್ತು. ಮಂಗಳೂರಿನ ಆಸ್ಪತ್ರೆಗೆ ತಲಪಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.

ಈ ಕುರಿತು ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this article

ಟಾಪ್ ನ್ಯೂಸ್