ಕಾಪು ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಆಪರೇಷನ್ ಕಮಲ ಸದ್ದು ಮಾಡಿದ್ದು, ಎಸ್‌ಡಿಪಿಐಗೆ ಭಾರತೀಯ ಜನತಾ ಪಕ್ಷ ಆಪರೇಷನ್ ಮಾಡಿದೆ.
ಎಸ್‌ಡಿಪಿಐನಿಂದ ಗೆದ್ದಿರುವ ಸರಿತಾ ಶಿವಾನಂದ್ ಬಿಜೆಪಿಗೆ ಸೇರ್ಪಡೆಯಾಗಿ ಉಪಾಧ್ಯಕ್ಷೆಯಾಗಿದ್ದಾರೆ. ಕಾಪು ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸರಿತಾ ಶಿವಾನಂದ್ ಬಿಜೆಪಿ ಸೇರ್ಪಡೆಯಾಗಿ ಮಧ್ಯಾಹ್ನ ಪುರಸಭೆ ಉಪಾಧ್ಯಕ್ಷೆಯಾಗಿದ್ದಾರೆ.
ಕಾಪು ಬಿಜೆಪಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಮ್ಮುಖದಲ್ಲಿ ಸರಿತಾ ಶಿವಾನಂದ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅಧ್ಯಕ್ಷ /ಉಪಾಧ್ಯಕ್ಷ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿಗೆ ಉಪಾಧ್ಯಕ್ಷ ಸ್ಥಾನ ಬಂದಿತ್ತು. 12 ಸದಸ್ಯ ಬಲದ ಬಿಜೆಪಿಯಲ್ಲಿ ಪರಿಶಿಷ್ಟ ಜಾತಿಯ ಸದಸ್ಯರು ಇರಲಿಲ್ಲ. ಕಾಂಗ್ರೆಸ್ ಪಕ್ಷ ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿತ್ತು. ಚುನಾವಣೆ ನಡೆಯುವ ಕೆಲವೇ ಗಂಟೆಗಳ ಮೊದಲು SDPI ಸದಸ್ಯೆ ಸರಿತಾ ಶಿವಾನಂದ್ ಬಿಜೆಪಿ ಸೇರ್ಪಡೆಯಾಗುವ ಮೂಲಕ ಕಾಂಗ್ರೆಸ್ ಆಸೆ ತಣ್ಣೀರೆರೆಚಿದ್ದಾರೆ. ಅಧ್ಯಕ್ಷೆಯಾಗಿ ಹರಿಣಾಕ್ಷಿ, ಉಪಾಧ್ಯಕ್ಷೆಯಾಗಿ ಸರಿತಾ ಶಿವಾನಂದ ಆಯ್ಕೆಯಾಗಿದ್ದಾರೆ