Breaking:

ಕಾಪು: ಸಮುದ್ರ ಪಾಲಾಗುತ್ತಿದ್ದ ಯುವಕನ ರಕ್ಷಣೆ

ಕಾಪು: ಸಮುದ್ರ ಪಾಲಾಗುತ್ತಿದ್ದ ಯುವಕನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ ಘಟನೆ ಇಂದು ಕಾಪು ಬೀಚ್ ನಲ್ಲಿ ನಡೆದಿದೆ.

ಕಾಪು ಪಡುಗ್ರಾಮದ ನಿವಾಸಿ ಸಚಿನ್(31) ಸ್ಥಳೀಯ ಮೀನುಗಾರರಿಂದ ರಕ್ಚಿಸಲ್ಪಟ್ಟ ಯುವಕ.

ಸಚಿನ್ ಸಾಂಪ್ರದಾಯಿಕ ಮೀನುಗಾರಿಕೆಗಾಗಿ ಬಲೆ ಇಡಲೆಂದು ಬಲೆಯೊಂದಿಗೆ ತೆರಳಿದ್ದ ವೇಳೆ ಸಮುದ್ರದಲ್ಲಿ ಮುಳುಗಿ, ಸಮುದ್ರ ಪಾಲಾಗುವ ಭೀತಿ ಎದುರಾಗಿತ್ತು. ಇದನ್ನು ಗಮನಿಸಿದ ಮೀನುಗಾರಿಕಾ ವೃತ್ತಿನಿರತರಾದ ಶರ್ಮಾ, ಹರೀಶ್ ಕರ್ಕೇರ ಅವರು ಸಮುದ್ರಕ್ಕೆ ಇಳಿದು ಯುವಕನ ಪ್ರಾಣ ರಕ್ಷಿಸಿದ್ದಾರೆ.

ಯುವಕನನ್ನು ರಕ್ಷಿಸಿ ಮೇಲಕ್ಕೆ ಕರೆತರುವಾಗ ರಕ್ಷಣಾ ದೋಣಿ ಕೂಡಾ ಮಗುಚಿ ಬಿದ್ದಿದ್ದು, ಈ ವೇಳೆ ಕಾಪು ಬೀಚ್ ನಲ್ಲಿರುವ ಲೈಫ್ ಗಾರ್ಡ್ ಗಳು ಅವರ ರಕ್ಷಣೆಗೆ ಧಾವಿಸಿದ್ದಾರೆ.



Share this article

ಟಾಪ್ ನ್ಯೂಸ್