ಕೇರಳದಲ್ಲಿ ಭೀಕರ ದುರಂತವೊಂದರಲ್ಲಿ ಕಾರಿಗೆ ಬೆಂಕಿ ತಗುಲಿ ಕಾರಿನಲ್ಲಿದ್ದ ವೃದ್ಧ ದಂಪತಿಗಳು ಸುಟ್ಟು ಕರಕಲಾಗಿದ್ದಾರೆ.
ಪತ್ತನಂತಿಟ್ಟ ಜಿಲ್ಲೆಯ ತಿರುವಲ್ಲಾದ ವೆಂಗಲ್‌ನಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಮೃತರನ್ನು ತಿರುವಲ್ಲಾದ ತುಕಲಶ್ಶೇರಿ ನಿವಾಸಿಗಳಾದ ರಾಜು ಥಾಮಸ್ (69) ಮತ್ತು ಅವರ ಪತ್ನಿ ಲೈಜಿ ಥಾಮಸ್ (63) ಎಂದು ಗುರುತಿಸಲಾಗಿದೆ.
ಕಾರಿನಲ್ಲಿದ್ದ ದಂಪತಿಯ ಪುತ್ರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೃದ್ಧ ದಂಪತಿಗಳ ಮೃತದೇಹದ ಅವಶೇಷಗಳು ಸಂಪೂರ್ಣವಾಗಿ ಸುಟ್ಟು ವಿರೂಪಗೊಂಡಿದ್ದರಿಂದ ಮಹಿಳೆ ಧರಿಸಿದ್ದ ಆಭರಣಗಳ ಮೂಲಕ ಅವರನ್ನು ಗುರುತಿಸಲಾಗಿದೆ.
ಸ್ಥಳದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರಿಂದ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯನಡೆಸಿದರು.