Breaking:

ಕೇರಳಕ್ಕೆ ಪ್ರತ್ಯೇಕ ವಿದೇಶಾಂಗ ಕಾರ್ಯದರ್ಶಿಯ ನೇಮಕ; ಭುಗಿಲೆದ್ದ ವಿವಾದ

ಕೇರಳದಲ್ಲಿ‌ನ ಪಿಣರಾಯಿ ವಿಜಯನ್‌ ನೇತೃತ್ವದ ರಾಜ್ಯ ಸರ್ಕಾರವು ಐಎಎಸ್‌ ಅಧಿಕಾರಿ ಕೆ. ವಾಸುಕಿ ಅವರನ್ನು ಕೇರಳದ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದು, ಬಿಜೆಪಿ ಈ ಬಗ್ಗೆ ವಿವಾದವನ್ನೇ ಸೃಷ್ಟಿಸಿದೆ.

ಕಾರ್ಮಿಕ ಮತ್ತು ಕೌಶಲ್ಯ ಇಲಾಖೆಯ ಕಾರ್ಯದರ್ಶಿ ಕೆ.ವಾಸುಕಿ, ವಿದೇಶ ಸಹಕಾರ ಸಂಬಂಧಿಸಿದ ವಿಷಯಗಳ ಹೆಚ್ಚುವರಿ ಉಸ್ತುವಾರಿ ವಹಿಸುತ್ತಾರೆ. ಅಸ್ತಿತ್ವದಲ್ಲಿರುವ ಅಧಿಕಾರಿಗಳೊಂದಿಗೆ ಹೆಚ್ಚುವರಿಯಾಗಿ ಅಧಿಕಾರಿಯು ಇದಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಸಮನ್ವಯಗೊಳಿಸುತ್ತಾರೆ ಮತ್ತು ಮೇಲ್ವಿಚಾರಣೆ ಮಾಡುತ್ತಾರೆ ಎಂದು ಕೇರಳ ಸರಕಾರ ಆದೇಶದಲ್ಲಿ ಹೇಳಿದೆ.

ಈ ವಿಚಾರವಾಗಿ ಬಿಜೆಪಿ ಕಿಡಿಕಾರಿದ್ದು, ಕೇರಳ ಸರ್ಕಾರವು ರಾಜ್ಯಕ್ಕೆ ವಿದೇಶ ವ್ಯವಹಾರಗಳ ಕಾರ್ಯದರ್ಶಿಯನ್ನು ನೇಮಿಸಿರುವುದು ಅಸಾಂವಿಧಾನಿಕ ಎಂದು ಕರೆದಿದೆ.

ಸಿಎಂ ಪಿಣರಾಯಿ ವಿಜಯನ್ ಕೇರಳದಲ್ಲಿ ಐಎಎಸ್ ಅಧಿಕಾರಿಯನ್ನು ‘ವಿದೇಶಾಂಗ ಕಾರ್ಯದರ್ಶಿ’ ಆಗಿ ನೇಮಕ ಮಾಡಿರುವುದು ನಮ್ಮ ಸಂವಿಧಾನದಕ್ಕೆ ವಿರುದ್ಧವಾಗಿದ್ದು ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವಿರುದ್ಧವಾಗಿದೆ. ಸಿಎಂ ಪಿಣರಾಯಿ ವಿಜಯನ್ ಕೇರಳವನ್ನು ಪ್ರತ್ಯೇಕ ರಾಷ್ಟ್ರವಾಗಿ ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆಯೇ? ಎಂದು ಬಿಜೆಪಿ ಕಿಡಿಕಾರಿದೆ.

Share this article

ಟಾಪ್ ನ್ಯೂಸ್