ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಪತಿಯಿಂದ ವೀರ್ಯವನ್ನು ಸಂಗ್ರಹಿಸಲು ಕೇರಳ ಹೈಕೋರ್ಟ್ ಅನುಮತಿಸಿದೆ.
ಮಕ್ಕಳಿಲ್ಲದ ಕೇರಳದ ಮಹಿಳೆಯೊಬ್ಬರು ತನ್ನ ಪತಿಯ ವೀರ್ಯವನ್ನು ಸಂರಕ್ಷಿಸಲು ಅನುಮತಿ ಕೋರಿ ಕೇರಳ ಹೈಕೋರ್ಟ್‌ನ ಮೊರೆ ಹೋಗಿದ್ದರು. ತಮ್ಮ ಪತಿ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಇದುವರೆಗೂ ಮಕ್ಕಳಾಗಿಲ್ಲ . ಆದ್ದರಿಂದ ಭವಿಷ್ಯದಲ್ಲಿ ತನಗೆ ಮಗುವಾಗಲು ಗಂಡನ ವೀರ್ಯವನ್ನು ಸಂರಕ್ಷಿಸಲು ಅವಕಾಶ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದರು.
ಗಂಡನ ಸ್ಥಿತಿ ಚಿಂತಾಜನಕವಾಗಿರುವ ಕಾರಣ ಲಿಖಿತ ಒಪ್ಪಿಗೆಯನ್ನು ಪಡೆಯಲು ಸಾಧ್ಯವಾಗಲಿಲ್ಲ. ವಿಳಂಬವಾದರೆ ಪರಿಸ್ಥಿತಿ ಬಿಗಡಾಯಿಸಿ ಪ್ರಾಣಾಪಾಯ ಎದುರಾಗುತ್ತದೆ. ಹೀಗಾಗಿ ಕೂಡಲೇ ನ್ಯಾಯ ಕೊಡಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಮನವಿ ಸ್ವೀಕರಿಸಿದ ನ್ಯಾಯಮೂರ್ತಿ ವಿ.ಜಿ.ಅರುಣ್ ಪತಿಯಿಂದ ವೀರ್ಯವನ್ನು ಸಂಗ್ರಹಿಸಿ ಸಂರಕ್ಷಿಸಲು ಅನುಮತಿ ನೀಡಿದ್ದಾರೆ.