Breaking:

ವಯನಾಡು ಭೂಕುಸಿತ ಪ್ರದೇಶದಲ್ಲಿ ಅವಶೇಷಗಳಡಿ ಸಿಲುಕಿ ರಕ್ಷಣೆಗಾಗಿ ಅಂಗಲಾಚಿದ ವ್ಯಕ್ತಿ; ಹೃದಯವಿದ್ರಾಹಕ ಘಟನೆಯ ವಿಡಿಯೋ ವೈರಲ್

ಕೇರಳದ ವಯನಾಡು ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ, ಭಯಾನಕ ದೃಶ್ಯವೊಂದು ವೈರಲ್ ಆಗಿದೆ‌. ವ್ಯಕ್ತಿಯೊಬ್ಬರು ಮಣ್ಣಿನಡಿ ಸಿಲುಕಿಕೊಂಡಿದ್ದು, ಬೃಹತ್ ಬಂಡೆ ಹಿಡಿದುಕೊಂಡು ಸಹಾಯಕ್ಕಾಗಿ ಅಂಗಲಾಚಿದ ಹೃದಯ ವಿದ್ರಾವಕ ವೀಡಿಯೊ ವೈರಲ್ ಆಗಿದೆ.

ಭೂಕುಸಿತದಲ್ಲಿ ಸಿಲುಕಿರುವ ವ್ಯಕ್ತಿ ಸಹಾಯ ಕೋರಿದ್ದಾರೆ. ಈ ಹೃದಯ ವಿದ್ರಾವಕ ವೀಡಿಯೊ ವೈರಲ್ ಆಗಿದೆ. ಪ್ರವಾಹದ ನೀರಿನಲ್ಲಿ ಬಂಡೆಗಳ ನಡುವೆ ಸಿಲುಕಿಕೊಂಡಿರುವ ವ್ಯಕ್ತಿ ನನ್ನನ್ನು ರಕ್ಷಿಸಿ ಎಂದು ಬೇಡಿಕೊಂಡಿದ್ದಾನೆ.

ವಯನಾಡು ಭೂಕುಸಿತದಿಂದ 100ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಈವರೆಗೆ ಘಟನಾ ಸ್ಥಳದಲ್ಲಿ  83 ಮೃತದೇಹಗಳು ಪತ್ತೆಯಾಗಿದೆ.  ಬಿರುಸಿನ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

 

Share this article

ಟಾಪ್ ನ್ಯೂಸ್