Breaking:

ವರದಕ್ಷಿಣೆ ಕಿರುಕುಳದಿಂದ ಬೇಸತ್ತು ನವವಿವಾಹಿತೆ ಆತ್ಮಹತ್ಯೆ; ಪತಿಯ ಮನೆಯ ಬಾಗಿಲಲ್ಲೇ ಅಂತ್ಯಸಂಸ್ಕಾರ ಮಾಡಲು ಮುಂದಾದ ಕುಟುಂಬ

ವರದಕ್ಷಿಣೆ ಕಿರುಕುಳದಿಂದಾಗಿ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿಯ ಮನೆಯ ಮುಂದೆ ಶವವನ್ನು ಅಂತ್ಯಸಂಸ್ಕಾರ ಮಾಡಲು ಮಹಿಳೆಯ ಪೋಷಕರು ಯತ್ನಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಪತಿಯ ಮನೆಯವರ ವರದಕ್ಷಿಣೆ ಕಿರುಕುಳದಿಂದಾಗಿ ಕೋಲಾರದಲ್ಲಿ ನವವಿವಾಹಿತೆ ಮಾನಸ ಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕೋಲಾರ ತಾಲೂಕಿನ ತೂರಾಂಡಹಳ್ಳಿ ಗ್ರಾಮದಲ್ಲಿರುವ ಪತಿ ಉಲ್ಲಾಸ್ ಗೌಡ ಮನೆಯ ಎದುರು ಪತ್ನಿ ಮಾನಸ ಗೌಡ ಅವರ ಶವವನ್ನಿಟ್ಟು ಪ್ರತಿಭಟನೆ ಮಾಡಿದ್ದಾರೆ.

24 ವರ್ಷದ ಮಾನಸ ಗೌಡ ಹಾಗೂ ತೂರಾಂಡಹಳ್ಳಿ ಗ್ರಾಮದ ಉಲ್ಲಾಸ್ ಗೌಡ ನಡುವೆ ಕಳೆದ ವರ್ಷ ಅದ್ದೂರಿಯಾಗಿ ಮದುವೆ ನಡೆದಿತ್ತು.ಆದರೆ ಮದುವೆಯಾಗಿ ವರ್ಷ ಕಳೆಯುವಷ್ಟರಲ್ಲಿಯೇ ಉಲ್ಲಾಸ್‌ ಗೌಡ ಕುಟುಂಬದಿಂದ ವರದಕ್ಷಿಣೆ ಕಿರುಕುಳ ಶುರುವಾಗಿತ್ತು. ಇದರಿಂದಾಗಿ ಮನನೊಂದಿದ್ದ ಮಾನಸ ತವರು ಮನೆಗೆ ಬಂದಿದ್ದಳು. ಶನಿವಾರ ರಾತ್ರಿ ಡೆತ್‌ ನೋಟ್‌ ಬರೆದಿಟ್ಟು ಮಾನಸ ಗೌಡ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮಾನಸ ಗೌಡ ಅವರ ಕುಟುಂಬ ಮಗಳ ಅಂತ್ಯ ಸಂಸ್ಕಾರವನ್ನು ಪತಿಯ ಮನೆಯ ಮುಂದೆಯೇ ಮಾಡಲು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದ್ದರು.
ವರನ ಮನೆಯ ಬಾಗಿಲಲ್ಲೇ ಅಂತ್ಯಸಂಸ್ಕಾರ ಮಾಡಲು ಮುಂದಾಗಿದ್ದ ಮೃತ ಮಾನಸ ಪೋಷಕರಿಗೆ ಸಮಾಧಾನ ಮಾಡುವಲ್ಲಿ ಪೊಲೀಸರು ಕೊನೆಗೆ ಯಶಸ್ವಿಯಾಗಿದ್ದಾರೆ. ಬಳಿಕ ಮನೆಯ ಕೈತೋಟದಲ್ಲಿಯೇ ಅಂತ್ಯ ಸಂಸ್ಕಾರ ನೆರವೇರಿದೆ.



Share this article

ಟಾಪ್ ನ್ಯೂಸ್