Breaking:

ಕೋರಮಂಗಲ ಪಿಜಿಯಲ್ಲಿ ಯುವತಿಯ ಕೊಲೆ ವಿಡಿಯೋ ವೈರಲ್: ಸಂತ್ರಸ್ತೆ ಯಾಚಿಸಿದರೂ ಸಹಾಯಕ್ಕೆ ಮುಂದಾಗದ ಯುವತಿಯರು!

ಬೆಂಗಳೂರು: ಕೋರಮಂಗಲದ ಪಿಜಿಯೊಂದರಲ್ಲಿ ನಡೆದ ಕೃತಿ ಕುಮಾರಿ ಎಂಬ ಯುವತಿಯ ಮರ್ಡರ್ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ವಿಡಿಯೋವನ್ನು ವೈರಲ್ ಮಾಡಲಾಗಿದೆ.

ಕೊಲೆಯ ವೇಳೆ  ಯುವತಿ ರಕ್ತದ ಮಡುವಿನಲ್ಲಿ ಬಿದ್ದು ಸಹಾಯಕ್ಕಾಗಿ ಯಾಚಿಸುತ್ತಿದ್ದರೂ, ಅಲ್ಲಿದ್ದ ಇತರ ಯುವತಿಯರು ಆಕೆಯ ಸಹಾಯಕ್ಕೆ ಬರದೆ ತಮ್ಮಷ್ಟಕ್ಕೇ ಹೋಗಿದ್ದು ವಿಡಿಯೋದಲ್ಲಿ ದಾಖಲಾಗಿದ್ದು, ಟೀಕೆಗೆ ಕಾರಣವಾಗಿದೆ.

ಜು.23ರಂದು ಕೋರಮಂಗಲದ ಪಿಜಿಯಲ್ಲಿ ಕೃತಿ ಕುಮಾರಿ ಕೊಲೆ ನಡೆದಿತ್ತು. ಕತ್ತು, ಎದೆ, ಹೊಟ್ಟೆ ಭಾಗ ಸೇರಿ ಹಲವು ಕಡೆ ಇರಿದು ಆಕೆಯನ್ನು ಕೊಲೆ ಮಾಡಲಾಗಿದೆ‌. ಆಕೆಯ ಪ್ರಿಯಕರನೇ ಆಕೆಯನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ‌.

ಇದೀಗ ಆರೋಪಿ ಅಭಿಷೇಕ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಆತ ಭೊಪಾಲ್ ಗೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

Share this article

ಟಾಪ್ ನ್ಯೂಸ್