Breaking:

ಮಹಿಳೆಯರನ್ನು ಕೊಲೆ ಮಾಡಿ ಲಿಪ್ ಸ್ಟಿಕ್, ರವಿಕೆ ಕೊಂಡೊಯ್ಯುತ್ತಿದ್ದ ಸೀರಿಯಲ್ ಕಿಲ್ಲರ್ ಅರೆಸ್ಟ್; ಈತ ಎಷ್ಟು ಮಂದಿಯನ್ನು ಕೊಲೆ ಮಾಡಿದ್ದಾನೆ ಗೊತ್ತಾ?

14 ತಿಂಗಳೊಳಗೆ 9 ಮಂದಿ ಮಹಿಳೆಯರನ್ನು ಸೀರೆಯಿಂದಲೇ ಕೊಲೆಗೈದ ಆರೋಪಿಯನ್ನು ಬಂಧಿಸುವಲ್ಲಿ ಉತ್ತರಪ್ರದೇಶದ ಬರೇಲಿ ಪೊಲೀಸರು ಬಂಧಿಸಿದ್ದಾರೆ.

ಬರೇಲಿಯ ಬಕರ್‌ಗಂಜ್ ನಿವಾಸಿ, ಸೀರಿಯಲ್ ಕಿಲ್ಲರ್ ಆರೋಪಿಯನ್ನು ಕುಲದೀಪ್‌ ಎಂದು ಗುರುತಿಸಲಾಗಿದೆ.

ಈತ ಗ್ರಾಮದಲ್ಲಿ ಒಂಟಿಯಾಗಿ ತಿರುಗಾಡುತ್ತಿದ್ದ ಈತ ಎಲ್ಲಿಯಾದರೂ ಒಂಟಿ ಮಹಿಳೆ ಕಂಡರೆ ಮೊದಲು ಆಕೆಯನ್ನು ಹಿಂಬಾಲಿಸುತ್ತಿದ್ದ. ನಂತರ ತನ್ನ ಮಾತಿನಲ್ಲಿಯೇ ಆಕೆಯನ್ನು ತನ್ನ ಬಲೆಗೆ ಬೀಳಿಸುತ್ತಿದ್ದ. ಇದಾದ ಬಳಿಕ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದ. ಅಲ್ಲದೇ ಸೀರೆ ಅಥವಾ ದುಪ್ಪಟ್ಟಾದಿಂದ ಕತ್ತಿಗೆ ಬಿಗಿದು ಸಾಯಿಸುತ್ತಿದ್ದ ಎನ್ನುವುದು ತನಿಖೆಯ ವೇಳೆ ಬಯಲಾಗಿದೆ.

ಗ್ರಾಮದಲ್ಲಿ  ಸರಣಿ ಕೊಲೆ ಬಗ್ಗೆ ತನಿಖೆ ನಡೆಸುತ್ತಿದ್ದ ಪೊಲೀಸರು ಹಂತಕರಿಗಾಗಿ ತೀವ್ರ ಶೋಧ ನಡೆಸುತ್ತಿದ್ದರು. ಇತ್ತೀಚೆಗೆ ಶಂಕಿತ ಹಂತಕರ ರೇಖಾಚಿತ್ರಗಳನ್ನು ಸಹ ಬಿಡುಗಡೆ ಮಾಡಿದ್ದರು. ಈ ವೇಳೆ ಸೀರಿಯಲ್ ಕಿಲ್ಲರ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪೊಲೀಸ್‌ ಅಧಿಕಾರಿ ಆರೋಪಿಯ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಆರೋಪಿಯು ವಿಚಿತ್ರವಾದ ಅಭ್ಯಾಸವನ್ನು ಹೊಂದಿದ್ದಾನೆ. ಅವನು ಇಲ್ಲಿಯವರೆಗೆ ಮಾಡಿದ ಪ್ರತಿಯೊಂದು ಕೊಲೆಯ ಬಳಿಕ ನೆನಪಿಗೋಸ್ಕರ ಸ್ಥಳದಿಂದ ಮಹಿಳೆಯ ಯಾವುದಾದರು ಒಂದು ವಸ್ತುವನ್ನು ತೆಗೆದುಕೊಂಡು ಹೋಗುತ್ತಿದ್ದ ಎಂದು ಹೇಳಿದ್ದಾರೆ.

ಆರೋಪಿ ಕುಲದೀಪ್ ಮಹಿಳೆಯರಿಂದ ಕುಡುಗೋಲು, ಬಿಂದಿ, ಲಿಪ್ ಸ್ಟಿಕ್, ರವಿಕೆ, ಮತದಾರರ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಹೀಗೆ ಒಬ್ಬೊಬ್ಬರ ಕೊಲೆಯಿಂದ ಒಂದೊಂದು ವಸ್ತು ಸಂಗ್ರಹಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿವರವಾದ ವಿಚಾರಣೆಯ ಅಗತ್ಯವಿದೆ ಎಂದು ಹೇಳಿದ್ದಾರೆ.

 

Share this article

ಟಾಪ್ ನ್ಯೂಸ್