Breaking:

ಸುದ್ದಿಗೋಷ್ಟಿಯಲ್ಲಿ ಮಾತನಾಡುವಾಗ ಕುಮಾರಸ್ವಾಮಿ ಮೂಗಿನಿಂದ ರಕ್ತಸ್ರಾವ

ಮುಡಾ ಹಗರಣದ ಕುರಿತಂತೆ ಬಿಜೆಪಿ ಹಾಗೂ ಜೆಡಿಎಸ್  ನಾಯಕರು ಹೋರಾಟದ ರೂಪುರೇಷೆ ಕುರಿತಂತೆ ಬೆಂಗಳೂರಿನಲ್ಲಿ ಸಭೆ ನಡೆದಿತ್ತು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಕುಮಾರಸ್ವಾಮಿ ಮಾತನಾಡುತ್ತಿದ್ದರು. ಈ ವೇಳೆ ಅವರ ಮೂಗಿನಿಂದ ಏಕಾಏಕಿ ರಕ್ತ ಸುರಿದಿದೆ. ಮೊದಲು ತಮ್ಮ ಬಳಿ ಇರುವ ಟವೆಲ್‌ನಿಂದ ಹೆಚ್‌ಡಿಕೆ ರಕ್ತ ಒರೆಸಿಕೊಂಡಿದ್ದಾರೆ. ಆದರೆ ಮತ್ತೆ ಜಾಸ್ತಿ ರಕ್ತ ಬಂದು ಅವರ ಬಿಳಿ ಶರ್ಟ್‌ಗೂ ತಗುಲಿದೆ. ಈ ವೇಳೆ ಹೆಚ್‌ಡಿ ಕುಮಾರಸ್ವಾಮಿ ಕೊಂಚ ಗಾಬರಿಗೊಂಡಿದ್ದಾರೆ.

ಈ ವೇಳೆ ಅವರ ಬಳಿಯೇ ಇದ್ದ ಮಾಜಿ ಸಿಎಂ ಯಡಿಯೂರಪ್ಪ  ಹಾಗೂ ಹೆಚ್‌ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಅಲ್ಲಿದ್ದವರೆಲ್ಲ ಗಾಬರಿಯಾಗಿದ್ದಾರೆ. ನಂತರ ಬೆಂಗಳೂರಿನ ಜಯನಗರದಲ್ಲಿ ಇರುವ ಖಾಸಗಿ ಆಸ್ಪತ್ರೆಗೆ ಕುಮಾರಸ್ವಾಮಿ ತೆರಳಿದ್ದಾರೆ.

 

Share this article

ಟಾಪ್ ನ್ಯೂಸ್