Breaking:

ಯುವಕನೋರ್ವ ಹೃದಯಾಘಾತದಿಂದ ಮೃತ್ಯು; ಒಂದು ವಾರದಿಂದ ಮೃತದೇಹಕ್ಕಾಗಿ ಕಾಯುತ್ತಿರುವ ಹೆತ್ತವರು

ಕುಷ್ಟಗಿಯ ಯುವಕನೋರ್ವ ಐರ್ಲೆಂಡ್‌ನಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.

ಶ್ರೀಧರ ನಾಡಗೌಡ ವಾರದ ಹಿಂದೆಯೇ ಹೃದಯಾಘಾತದಿಂದ ಮೃತಪಟ್ಟಿದ್ದು, ಇವರು ತಾಲ್ಲೂಕು ಪಂಚಾಯಿತಿ ನಿವೃತ್ತ ವ್ಯವಸ್ಥಾಪಕ ರೇವಣ್ಣ ನಾಡಗೌಡ ದಂಪತಿಯ ದ್ವಿತೀಯ ಪುತ್ರ. ಇವರು ಕಳೆದ ಜೂನ್‌ನಲ್ಲಿ ಐರ್ಲೆಂಡ್‌ಗೆ ತೆರಳಿದ್ದರು.

ತುಮಕೂರಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ನಂತರ ಐರ್ಲೆಂಡ್‌ ರಾಜಧಾನಿ ಡಬ್ಲಿನ್‌ನಲ್ಲಿ ಉನ್ನತ ವ್ಯಾಸಂಗ ಮುಗಿಸಿ ನಂತರ ಅದೇ ದೇಶದ ಗಾಲ್ವೆಯಲ್ಲಿನ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಕಂಡುಕೊಂಡಿದ್ದರು.

ಶ್ರೀಧರ ಜುಲೈ 31ರಂದು ಮೃತಪಟ್ಟಿದ್ದು, ಕಂಪನಿಯ ಮೂಲಕ ಹೆತ್ತವರಿಗೆ ವಿಷಯ ತಿಳಿದಿದೆ.

ಮೃತದೇಹ ನಾಳೆ ಬೆಂಗಳೂರು ತಲುಪುವ ನಿರೀಕ್ಷೆ ಇದೆ.

Share this article

ಟಾಪ್ ನ್ಯೂಸ್